ಚಿತ್ರದುರ್ಗ: ಠೇವಣಿ ಇಟ್ಟ ಮೊತ್ತವನ್ನು ಎರಡು ತಿಂಗಳಲ್ಲಿ ದುಪ್ಪಟ್ಟು ಮಾಡಿಕೊಡುವ ವಂಚಕ ಕಂಪನಿ ಮಾತಿಗೆ ಮರಳಾಗಿ 106 ಜನರು ಅಂದಾ ಜು 4.80 ಕೋಟಿ ರೂ.ಕಳೆದುಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಈ ಕುರಿತಂತೆ ಚಿಕ್ಕಜಾಜೂರು ರೈಲ್ವೆ ನೌಕರರ ಪಿ.ರಮೇಶಪ್ಪ ಅವರು,ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಠಾಣೆಗೆ ಕಳೆದ ಡಿಸೆಂಬರ್ 15ರಂದು ದಾಖಲಿಸಿರುವ ದೂರಿನ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಣ ಕಳೆದುಕೊಂಡಿರುವವರ ಪೈಕಿ ಕರ್ನಾಟಕ,ರಾಜಸ್ತಾ ನ,ಆಂಧ್ರಪ್ರದೇಶದವರು ಸೇರಿ ಚಿಕ್ಕಜಾಜೂರು ರೈಲ್ವೆ ನೌಕರರು,ಅವರ ಸಂಬಂಧಿಕರು,ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಎಸ್.ಪಿ.ಧಮೇಂದರ್‌ಕುಮಾರ್‌ಮೀನಾ ಅವರು ಪ್ರಕರಣಕ್ಕೆ ಮರು ಜೀವ ನೀಡಿ ಚಿತ್ರದುರ್ಗ ಸಿಇಎನ್ ಠಾಣೆಗೆ ವರ್ಗಾಯಿಸಿ ತನಿ ಖೆಗೆ ಆದೇಶಿಸಿದ್ದಾರೆ. ದಿ ಬ್ಯಾನಿಂಗ್ ಆಫ್ ಅನ್‌ರೆಗ್ಯುಲೇಟೆಡ್ ಡೆಪಾಸಿಟ್ ಸ್ಕೀಮ್ಸ್ ಆರ್ಡಿನೆನ್ಸ್-2019ರ ಕಾಯ್ದೆ ಅಡಿ ಸಿಇಎನ್ ಪೊ ಲೀಸರು ತನಿಖೆ ಮುಂದುವರಿಸಿದ್ದಾರೆ.
ಏನಿದು ವಂಚನೆ ಪ್ರಕರಣ?
ಅಂದಾಜು 10 ತಿಂಗಳ ಹಿಂದೆ ಚಿಕ್ಕಜಾಜೂರು ರೈಲ್ವೆ ನೌಕರರಾದ ಪಿ.ವಿ.ಶೇಷಯ್ಯ ಹಾಗೂ ಎಂ.ಏಳುಕುಂಡಲು ಅವರ ಮಾಹಿತಿ ಆಧರಿಸಿ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆ ಕೋಡೆರಮಣಯ್ಯ ಎಂಬುವವರಿಗೆ ಸೇರಿದ ಕ್ರೌಡ್ ಕ್ಲಬ್‌ಇಂಟರ್ ನ್ಯಾಷನಲ್ ಕಂಪನಿಯಲ್ಲಿ ಹ ಣ ಹೂಡಿಕೆ ಮಾಡಿದರೆ 60 ದಿನಗಳಲ್ಲಿ ಡಬಲ್ ಆಗುತ್ತದೆ ಎಂದು ನಂಬಿ, ಹೊಸದುರ್ಗ ತಾಲೂಕು ಬಾಗೂರಿನ ರಮೇಶಪ್ಪ, ತಮ್ಮ ಸ್ನೇಹಿತ ರವೀಂದ್ರರ ಹೆಸರಲ್ಲಿ 1.4 ಲಕ್ಷ ರೂ.ಹೂಡಿಕೆ ಮಾಡಿದ್ದರು.
ಎರಡು ತಿಂಗಳ ಬಳಿಕ ಕಂಪನಿ ಅವರಿಗೆ 1.96 ಲಕ್ಷ ರೂ.ಹಿಂದಿರುಗಿಸಿದೆ. ಇದನ್ನು ನಂಬಿದ್ದ ಅವರು,ಮತ್ತೆ 1.40 ಲಕ್ಷ ರೂ.ಹೂಡಿಕೆ ಮಾಡಿದ್ದರು. ಇವರಂತೆ ರೈಲ್ವೆ ಸಿಬ್ಬಂದಿ,ಸಂಬಂಧಿಕರು,ಸ್ನೇಹಿತರು ಸೇರಿ 106 ಮಂದಿ ವಿವಿಧ ಬ್ಯಾಂಕ್‌ಗಳ ಮೂಲಕ 4,79, 99,000 ರೂ.ಗಳನ್ನು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು.
ಆದರೆ ತಾನು ಮಾಡಿಕೊಂಡಿದ್ದ ಒಪ್ಪಂದಂತೆ ಹೂಡಿಕೆದಾರರಿಗೆ ಕಂಪನಿ ಅವಧಿ ಮೀರಿದ ಬಳಿಕ ಹಣವನ್ನು ಕೊಟ್ಟಿಲ್ಲ. ಕಂಪನಿ ನಂಬ ರ್‌ಗಳಿಗೆ ಮಾಡಿದ್ದ ಪೋನ್ ಕರೆಗಳಿಗೆ,ವಾಟ್ಸ್‌ಆ್ಯಪ್ ಸಂದೇಶಗಳಿಗೆ ಉತ್ತರ ಸಿಕ್ಕಿಲ್ಲವೆಂದು ರಮೇಶಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆ ಯಲ್ಲಿ ತನಿಖೆ ಆರಂಭಿಸಿರುವ ಪೊಲೀಸರಿಗೆ ಈವರೆಗೂ, ಆರೋಪಿ ಕೋಡೆರಮಣಯ್ಯನನ್ನು ಎಲ್ಲಿದ್ದಾನೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ಲುಕ್‌ಔಟ್‌ನೋಟಿಸ್
ಆರೋಪಿಗೆ ಸಂಬಂಧಿಸಿದ ಬ್ಯಾಂಕ್‌ಗಳ ಖಾತೆಗಳನ್ನು ಸೀಜ್ ಮಾಡಲು ಆಂಧ್ರಪ್ರದೇಶದ ಪೊಲೀಸರಿಗೆ ಹಾಗೂ ಆರೋಪಿಯ ಆಸ್ತಿ ವಿವರಕ್ಕೆ ಕೋರಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆರೋಪಿಯ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.