ಮೈಸೂರು: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಹಣ ಕಳೆದುಕೊಂಡವರು ತಕ್ಷಣವೇ 1930ಗೆ ಕರೆ ಮಾಡಿದರೆ ವಂಚನೆ ತಡೆಗಟ್ಟಲು ಸಾಧ್ಯವಾಗಲಿದೆ.
ಆನ್‌ಲೈನ್‌ನಲ್ಲಿ ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾರೆ. ಇದರಿಂದ ಸಾಕಷ್ಟು ಸಮಯ ಆಗಿರುತ್ತದೆ. ವಂಚನೆ ಆಗಿದೆ ಎಂದು ತಿಳಿದ ಕೂಡಲೇ ಕರೆ ಮಾಡಿದರೆ ಹಣ ಬೇರೆಡೆಗೆ ವರ್ಗಾವಣೆಯಾಗುವುದನ್ನು ತಡೆಯಬಹುದು. ಹಣ ವರ್ಗಾವಣೆಗೆ ನಾಲ್ಕು ಹಂತಗಳಲ್ಲಿದ್ದು, ಸೈಬರ್ ಕ್ರೈಂ ಪೊಲೀಸರು ಇದನ್ನು ಪರಿಶೀಲಿಸಿ ಹಣ ವಾಪಸ್ ಕೊಡಿಸಲು ಸಹಕಾರಿಯಾಗಲಿದೆ ಎಂದು ರಮೇಶ್ ಬಾನೋತ್ ತಿಳಿಸಿದರು.