ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು ರಾಜಧಾನಿಯ ಪಾದಚಾರಿ ಮೇಲ್ಸೇತುವೆ (ಸ್ಕೈವಾಕ್) ವರ್ಷಾಂತ್ಯಕ್ಕೆ ಜನಸೇವೆಗೆ ಲಭ್ಯವಾಗಲಿದೆ. ಸಂಚಾರ ಸಿಕ್ಕಿನ ಹಾಟ್ಸ್ಪಾಟ್ ಎನಿಸಿರುವ ಹಡ್ಸನ್ ವೃತ್ತದ ಸುತ್ತ ಈ ಅತಿದೊಡ್ಡ ಸ್ಕೈವಾಕ್ ನಿರ್ಮಾಣ ಕಾರ್ಯ ನಿರ್ಮಾಣ ಕಾಮಗಾರಿ ಆರಂಭಿಸಿದ್ದು, ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಯೋಜನೆ ಜಾರಿಯಾಗುತ್ತಿದೆ. ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ "ಯು' ಆಕಾರದ ಸ್ಕೈವಾಕ್ 150 ಮೀಟರ್ ಉದ್ದವಿರಲಿದ್ದು, ಕಬ್ಬನ್ಪಾರ್ಕ್ ಪ್ರವೇಶ ದ್ವಾರದ ಸಮೀಪದಿಂದ ಪ್ರಾರಂಭಗೊಂಡು, ಕಸ್ತೂರ್ಬಾ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ, ದೇವಾಂಗ ಸಮಾಜ ರಸ್ತೆ ಮೇಲೆ ಹಾದುಹೋಗಿ ಬಿಬಿಎಂಪಿ ಪ್ರಧಾನ ಕಚೇರಿ ಸಮೀಪದವರೆಗೆ ನಿಮಾರ್ಣಗೊಳ್ಳಲಿದೆ. ಕಬ್ಬನ್ ಪಾರ್ಕ್ ಕಡೆಯಿಂದ ಬಿಬಿಎಂಪಿ ಪ್ರಧಾನ ಕಚೇರಿ ಕಡೆಗೆ ಸಾಗುವ ಪಾದಚಾರಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಸ್ಕೈವಾಕ್ನ ವಿನ್ಯಾಸವು ಈಗಿರುವ ಪಾದಚಾರಿ ಮಾರ್ಗವನ್ನು ಸಂಪೂರ್ಣವಾಗಿ ರ್ನಿಬಂಧಿಸಿದೆ. ಕಾಮಗಾರಿ ನೀಲಿನೆಯನ್ನು ಗಮನಿಸಿದರೆ, ಪ್ರಸ್ತಾವಿತ ಸ್ಕೈವಾಕ್ ಪ್ರಮುಖ ಮೂರು ರಸ್ತೆಗಳ ಮೇಲೆ ಹಾದುಹೋಗಬೇಕಿದೆ. ಬಿಬಿಎಂಪಿ ಗೋಪುರ ಮತ್ತು ವೃತ್ತದ ಹಿಂದಿನ ಖಾಲಿ ಜಾಗದಲ್ಲಿ ಅಡಿಪಾಯ ಕೆಲಸವೂ ನಡೆಯುತ್ತಿದೆ. ಕಸ್ತೂರ್ಬಾ ರಸ್ತೆಯಲ್ಲಿ ಸ್ಕೈವಾಕ್ನ ಕಬ್ಬಿಣದ ಕೆಲಸಗಳು ಪ್ರಾರಂಭವಾಗಿ ತಿಂಗಳಾಗಿದ್ದು, ಇನ್ನೂ 4&5 ತಿಂಗಳ ಕಾಮಗಾರಿ ಬಾಕಿಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2017ರಲ್ಲಿ ಯೋಜನೆಗೆ ಅನುಮೋದನೆ ಲಭಿಸಿತ್ತು. ತಾಂತ್ರಿಕ ಸಮಸ್ಯೆ, ಕೋವಿಡ್ ಸೇರಿ ಹಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಮರುಜೀವ ಪಡೆದುಕೊಂಡಿದೆ. ಪ್ರಯಾಣಿಕರಿಂದ ಸ್ಕೆ$ವಾಕ್ ಉಪಯುಕ್ತತೆಯ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿವೆ. ಕೆಲವರು ಉಪಯೋಗಶೂನ್ಯ ಹಾಗೂ ಉಪಯುಕ್ತ ಎಂದವರಿದ್ದಾರೆ. ಆದರೆ, ಇನ್ನೂ ಕೆಲವರು ಭಾಗಶಃ (ಕೃಷಿ ಭವನದ ಬಳಿ) ಉಪಯುಕ್ತವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೂಲಸೌಕರ್ಯ ಸೇರಿ ಬಿಬಿಎಂಪಿ ಹಲವು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ಸ್ಕೈವಾಕ್ ಯೋಜನೆಗೆ ಹಸಿರುನಿಶಾನೆ ತೋರಲು ಸ್ವಲ್ಪ ತಡವಾಗಿದೆ. ಆದರೆ, ವರ್ಷದೊಳಗಾಗಿ ಹಡ್ಸನ್ ವೃತ್ತದ ಈ ಯೋಜನೆ ಪೂರ್ಣಗೊಳ್ಳುತ್ತದೆ. > ಬಿಬಿಎಂಪಿ ಹಿರಿಯ ಅಧಿಕಾರಿ ಸ್ಕೈವಾಕ್ ಅನ್ನು ಜನರು ಸರಿಯಾಗಿ ಬಳಕೆ ಮಾಡಿಕೊಂಡಲ್ಲಿ ಯೋಜನೆ ಯಶಸ್ವಿಯಾಗಲಿದೆ. ನಗರದ ಹಲವು ಕಡೆ ಸ್ಕೈವಾಕ್, ಅಂಡರ್ಪಾಸ್ಗಳು ನಿಷ್ಪ . ಜನರ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದಾದರೂ ಅಗತ್ಯತೆಯನ್ನು ಪರಿಶೀಲಿಸಿಯೇ ನಿರ್ಮಾಣ ಕಾರ್ಯಕ್ಕೆ ಕೈಹಾಕಬೇಕು. > ಮೊಹಮ್ಮದ್ ಸುಲ್ತಾನ್, ಟಿನ್ ಫ್ಯಾಕ್ಟರಿ ಸ್ಕೈವಾಕ್ ಜತೆಗೆ ಲಿಫ್ಟ್ಇತ್ಯಾದಿ ಸೌಲಭ್ಯಗಳು ದೊರಕುತ್ತದೆ. ಆದರೆ, ದೀರ್ಕಾಲಕ್ಕೆ ಯಾವುದೂ ಉಪಯೋಗದಲ್ಲಿ ಇರುವುದಿಲ್ಲ. ನಗರದಲ್ಲಿರುವ ಸ್ಕೈವಾಕ್ಗಳ ಲಿಫ್ಟ್ಗಳು ಕೆಟ್ಟಿರುವ ಉದಾಹರಣೆಗಳೇ ಹೆಚ್ಚು. ಯಾವುದೇ ಯೋಜನೆ ಆದರೂ ಪರಿಪೂರ್ಣವಾಗಿ ಜನರಿಗೆ ಉಪಯೋಗಕ್ಕೆ ಬರುವಹಾಗೆ ಆಗಬೇಕು. ಸರಿಯಾದ ಸಮಯಕ್ಕೆ ನಿರ್ವಹಣೆಯನ್ನು ಮಾಡಬೇಕು. > ರಾವೇಂದ್ರ, ಎಲೆಕ್ಟ್ರಾನಿಕ್ಸ್ ಸಿಟಿ
ನಿರ್ಮಾಣ ಸವಾಲು
* ಬೃಹದಾಕಾರದ ಸೇತುವೆ ನಿರ್ಮಾಣ ಕಾಮಗಾರಿ ನಡೆಸಲು ಜಾಗದ ಕೊರತೆ.
* ಕಾಮಗಾರಿ ಪ್ರದೇಶದಲ್ಲಿ ರಕ್ಷಣಾ ಸಿಬ್ಬಂದಿ ಕೊರತೆ. ಬೆಲೆಬಾಳುವ ಕಬ್ಬಿಣದ ತುಂಡುಗಳ ಕಳವಿಗೆ ಯತ್ನ ನಡೆದಿದೆ.
* ಕಾಮಗಾರಿಗಾಗಿ ವಿದ್ಯುತ್ ಸರಬರಾಜಿನಲ್ಲೂ ಸಮಸ್ಯೆ
* ಸಂಚಾರ ಸಿಕ್ಕಿನ ಮಧ್ಯೆ ಕಾಮಗಾರಿ ಪೂರ್ಣಗೊಳಿಸುವ ಸವಾಲು