ಹುಮನಾಬಾದ್: ಕಲ್ಯಾಣ ಕರ್ನಾಟಕ ಭಾಗದ ಕಲ್ಯಾಣ ನಾಡಿನ ಹೆಸರಾಂತ ಪೂಜ್ಯರ, ಸ್ವಾಮೀಜಿಗಳ ಜನ್ಮದಿನದಂದು ಅವರ ಹೆಸರಿನಲ್ಲಿ ಉಚಿತ ಕ್ಷೌರ ಸೇವೆ ಸಲ್ಲಿಸುತ್ತಿರುವ ಡಾ.ಮಲ್ಲಿಕಾರ್ಜುನ ಹಡಪದ ಸೂಗುರ ಕಾರ್ಯ ಶ್ಲಾಘನೀಯ ಎಂದು ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯರು ನುಡಿದರು.
ಪಟ್ಟಣದ ಸಂಗಮೇಶ ಹಡಪದ ಧುಮ್ಮನಸೂರ ನಿವಾಸದಲ್ಲಿ ಹಡಪದ ಅಪ್ಪಣ್ಣ ಸಮಾಜದಿಂದ ಗುರುವಾರ ಏರ್ಪಡಿಸಿದ್ದ ಹಡಪದ ಅಪ್ಪಣ್ಣ ಜ್ಯೋತಿ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಹಡಪದ ಶ್ರಮಿಕ ಸಮಾಜ. ಶರಣ ಹಡಪದ ಅಪ್ಪಣ್ಣನವರ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅನಾಥರು, ನಿರ್ಗತಿಕರು, ಅಂಧರು, ವಿಕಲಚೇತನರು, ಸಾಧು-ಸಂತರು, ಪೌರ ಕಾರ್ಮಿಕರು, ಕಾರ್ಮಿಕರಿಗೆ ಸೇರಿ ವಿವಿಧೆಡೆ ಉಚಿತ ಕ್ಷೌರ ಸೇವೆ ಮಾಡುತ್ತಿರುವುದು ಪುಣ್ಯದ ಕೆಲಸ ಎಂದರು.
ಸಮಾಜ ಸೇವಕ ಡಾ.ಮಲ್ಲಿಕಾರ್ಜುನ ಹಡಪದ ಸೂಗುರ ಅವರನ್ನು ಸನ್ಮಾನಿಸಲಾಯಿತು. ಶಹಾಬಾದ್‌ನ ಶ್ರೀ ರಾಜಶಿವಯೋಗಿ ಸ್ವಾಮೀಜಿ, ಕಲಬುರಗಿ ಗೌರವಾಧ್ಯಕ್ಷ ಬಸವರಾಜ ಹಡಪದ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ್, ಪ್ರಮುಖರಾದ ಮಚ್ಛೇಂದ್ರನಾಥ ಹಡಪದ, ಈರಪ್ಪ ಹಡಪದ, ಆಕಾಶ ಹಡಪದ, ಸಂಗಮೇಶ ಹಡಪದ, ಸಂಗಮೇಶ ಹಡಪದ ಕಲವಾಡಿ, ಮಲ್ಲಿಕಾರ್ಜುನ ಏಣಕೂರ, ವೀರಣ್ಣ ಹಡಪದ ಗಡವಂತಿ, ಸೂರ್ಯಕಾಂತ ಹಡಪದ ಸಿಂದನಕೇರಾ, ಸಿದ್ದಪ್ಪ ಹಡಪದ ಆಲೂರಕರ್, ಶಂಭುಲಿAಗ ಹಡಪದ ಕಲವಾಡಿ, ಆನಂದ, ಶಿವರಾಜ, ತೋಟೇಂದ್ರ ಹಡಪದ, ಸಿದ್ದಪ್ಪ ಮಹಾಗಾಂವ ಇತರರಿದ್ದರು.