ಕಲಬುರಗಿ: ಹಟಗಾರ ಸಮುದಾಯದ ಜನತೆಗೆ ಸಾಂಸ್ಕೃತಿಕ, ಸಾಮಾಜಿಕ, ಧರ‍್ಮಿಕ ಚಟುವಟಿಕೆ ಆಯೋಜಿಸಲು ಅನುಕೂಲವಾಗುವಂತೆ ಸಾಂಸ್ಕೃತಿಕ ಭವನ ನರ‍್ಮಾಣಕ್ಕಾಗಿ ೩೦ ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕ ಅಲ್ಲಮಪ್ರಭು ಪಾಟೀಲ್ ಭರವಸೆ ನೀಡಿದರು.
ಪತ್ರಿಕಾ ಭವನದ ಸಾಂಸ್ಕೃತಿಕ ಭವನದಲ್ಲಿ ಹಟಗಾರ ಸಮಾಜ ಅಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಿದ್ದ ರಾಷ್ಟಿçÃಯ ಕೈಮಗ್ಗ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಕರುಣೇಶ್ವರ ನಗರದಲ್ಲಿ ಹಟಗಾರ ಸಮಾಜದ ನಿವೇಶನವಿದ್ದು, ಅದರಲ್ಲಿ ಸಾಂಸ್ಕೃತಿಕ ಭವನ ನರ‍್ಮಾಣ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಮುಧೋಳದ ಎಸ್.ಆರ್.ಕಂಠಿ ಪದವಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಸುಲೋಚನಾ ಪಿ.ಚಂದಾ ಮಾತನಾಡಿ, ಪಾಲಕರು ಮನೆಯಲ್ಲಿ ಲಿಂಗ ತಾರತಮ್ಯ ಮಾಡಬಾರದು. ಹೆಣ್ಣು ಮಕ್ಕಳಿಗೆ ಗೌರವ ಸಿಗುವ ಕುಟುಂಬ ಸಮೃದ್ಧವಾಗಿರುತ್ತದೆ. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಿದರೆ, ನಿವೃತ್ತ ಜೀವನ ಆನಂದಮಯವಾಗಿ ಕಳೆಯಬಹುದು. ಸಮಾಜದ ಜನ ಶೈಕ್ಷಣಿಕ ಮತ್ತು ರ‍್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು.
ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ ಸಂಗಾ ಮಾತನಾಡಿ, ಸಮುದಾಯದವರು ಕಷ್ಟದಲ್ಲಿದ್ದಾಗ ಅವರ ನೆರವಿಗೆ ಒಕ್ಕೂಟ ಬರಲಿದೆ. ನೇಕಾರ ಬಾಂಧವರ ಬೆಳವಣಿಗೆಗೆ ಕೈಜೋಡಿಸಲು ಒಕ್ಕೂಟ ಸದಾ ಸಿದ್ಧ ಎಂದರು.
ಸಸ್ತಾಪುರದ ಶ್ರೀ ಡಾ.ಈಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ, ಸಂಘದ ಅಧ್ಯಕ್ಷ ಚನಮಲ್ಲಪ್ಪ ನಿಂಬೇಣಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಪುರಸ್ಕಾರ ಸಂಚಾಲಕ ಸೋಮಶೇಖರ ಧುತ್ತರಗಿ, ಗೌರವಾಧ್ಯಕ್ಷ ಶಿವಪುತ್ರಪ್ಪ ಭಾವಿ ಇತರರಿದ್ದರು.
ಸಮಾಜ ಸೇವಕರಾದ ನಾಗಮ್ಮ ಗೊಬ್ಬೂರ, ಶಿವಶಂಕರ ಮುನ್ನೋಳ್ಳಿ, ರಾಚಪ್ಪ ಚಂದಾ, ಡಾ.ಬಸವರಾಜ ಚನ್ನಾ, ವಿಜಯಕುಮಾರ ಮೇತ್ರೆ ಸೇರಿ ವಿವಿಧ ಇಲಾಖೆಯಲ್ಲಿ ಅನುಪಮ ಸೇವೆ ಸಲ್ಲಿಸಿದ ನಿವೃತ್ತ ನೌಕರರು, ಅಧಿಕಾರಿಗಳು, ಸಾಧಕ ವೈದ್ಯರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ೩೦ ವಿದ್ಯರ‍್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಸೃಜನಾ, ಸಂಪದಾ ಪ್ರರ‍್ಥಿಸಿದರು. ಸಂಘಟನಾ ಕರ‍್ಯರ‍್ಶಿ ರಾವಬಹಾದ್ದೂರ ರೂಗಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕರ‍್ಯರ‍್ಶಿ ಸರ‍್ಯಕಾಂತ ಸೊನ್ನದ ಸ್ವಾಗತಿಸಿದರು. ಹಿರಿಯ ಪತ್ರರ‍್ತ ಸಂಗಮನಾಥ ರೇವತಗಾಂವ್ ನಿರೂಪಣೆ ಮಾಡಿದರು. ಶಿವಲಿಂಗಪ್ಪ ವಂದಿಸಿದರು.