ಸೋಮವಾರಪೇಟೆ: ಅಬ್ಬೂರುಕಟ್ಟೆ ಒಕ್ಕಲಿಗರ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಹೊಸಳ್ಳಿಯ ಕುಶಾಲಪ್ಪ ಅವರ ಗದ್ದೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕೆಸರು ಗದ್ದೆ ಪುರುಷರ ಹಗ್ಗಾಜಗ್ಗಾಟ ಸ್ಪರ್ಧೆಯಲ್ಲಿ ನೇಗಳ್ಳೆ ಗ್ರಾಮ ತಂಡ ಪ್ರಥಮ ಬಹುಮಾನ ಮುಡಿಗೇರಿಸಿಕೊಂಡಿತು.
ರೋಚಕ ಪಂದ್ಯದಲ್ಲಿ ನೇರಳೆ ಗ್ರಾಮದ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಮಹಿಳೆಯರ ಹಗ್ಗಾಜಗ್ಗಾಟ ಸ್ಪರ್ಧೆಯಲ್ಲಿ ನೇಗಳ್ಳೆ ಪ್ರಥಮ ಹಾಗು ಆಡಿನಾಡೂರು ತಂಡ ದ್ವಿತೀಯ ಸ್ಥಾನ ಪಡೆಯಿತು.
ಪುರುಷರ ವಾಲಿಬಾಲ್‌ನಲ್ಲಿ ಕೂಗೂರು ಪಂಚಲಿಂಗೇಶ್ವರ ಯುವಕ ಸಂಘ ಪ್ರಥಮ, ಮದಲಾಪುರ ಕಲ್ಪವೃಕ್ಷ ಯುವಕ ಸಂಘ ದ್ವಿತೀಯ, ಮಹಿಳೆಯರ ಥ್ರೋಬಾಲ್‌ನಲ್ಲಿ ಶಾಂತಳ್ಳಿಯ ಭಾಗ್ಯಾ ಫ್ರೆಂಡ್ಸ್ ಪ್ರಥಮ, ನೇಗಳ್ಳೆ ವೀರಭದ್ರೇಶ್ವರ ಯುವತಿ ಮಂಡಳಿ ದ್ವಿತೀಯ ಸ್ಥಾನ ಪಡೆಯಿತು.
ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ರವೀಶ್ ಪ್ರಥಮ, ಅರೆಯೂರು ರಘು ದ್ವಿತೀಯ, ದಂಪತಿ ಓಟದಲ್ಲಿ ಅಬ್ಬೂರುಕಟ್ಟೆ ಸಂಭ್ರಮ್-ಭಾರ್ಗವಿ ಪ್ರಥಮ, ಮೋರಿಕಲ್ಲು ದೀಕ್ಷಿತ್-ನಿಶಾ ದ್ವಿತೀಯ, ಪಾಸಿಂಗ್‌ದ ಬಾಲ್‌ನಲ್ಲಿ ಚಿಕ್ಕಬ್ಬೂರು ವಾಣಿ ಪ್ರಥಮ, ಮೋರಿಕಲ್ಲಿ ಜ್ಯೋತಿ ದ್ವಿತೀಯ ಸ್ಥಾನ ಪಡೆದರು.
ಕ್ರೀಡಾಕೂಟ ಉದ್ಘಾಟಿಸಿದ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ,
ಒಕ್ಕಲುತನವೇ ಪ್ರಮುಖವಾಗಿರುವ ಸಮುದಾಯದ ರಂಜನೆಗೆ ಕ್ರೀಡೆ ಅಗತ್ಯ ಎಂದರು.