ಜಿಲ್ಲೆ

ಹಗರೆ, ಮಾದಿಹಳ್ಳಿಯಲ್ಲಿ ಗಣಪತಿ ವಿಸರ್ಜನೆ

ಬೇಲೂರು: ತಾಲೂಕಿನ ಹಗರೆ ಹಾಗೂ ಮಾದಿಹಳ್ಳಿ ಗ್ರಾಮಗಳ ಗಣಪತಿ ಸೇವಾ ಸಮಿತಿಯಿಂದ 11ನೇ ವರ್ಷದ ವಿಸರ್ಜನಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಬೇಲೂರು ತಾಲೂಕಿನ ಹಗರೆ ಹಾಗೂ ಪಕ್ಕದ ಮಾದಿಹಳ್ಳಿ ಗ್ರಾಮದಲ್ಲಿ 11 ವರ್ಷಗಳಿಂದ ಸತತವಾಗಿ ಪ್ರತಿ ವರ್ಷದಂತೆ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ. ಆದರೆ, ಪ್ರತಿವರ್ಷವೂ ಗಣೇಶಮೂರ್ತಿಗಳನ್ನು ಒಂದೇ ದಿನ ಒಟ್ಟಾಗಿ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಮಂಟಪದಲ್ಲಿ ಕುಳ್ಳಿರಿಸಿ ಗ್ರಾಮಗಳ ಹಲವಾರು ಬೀದಿಗಳಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಸಿ ಜಾನಪದ ಕಲಾ ತಂಡಗಳೊಂದಿಗೆ ವಾದ್ಯಗೋಷ್ಠಿ ಮೂಲಕ ನೂರಾರು ಭಕ್ತರ ಸಮ್ಮುಖದಲ್ಲಿ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಯಿತು. ಗಣೇಶ ಮೂರ್ತಿ ಮೆರವಣಿಗೆ ಸಂದರ್ಭ ಯುವಕರು ಕಲಾ ತಂಡಗಳ ಮೇಳಕ್ಕೆ ಕುಣಿದು ಕುಪ್ಪಳಿಸಿದರು. ನಂತರ ನೆರೆದಿದ್ದ ಭಕ್ತರಿಗೆ ಸಮಿತಿಯಿಂದ ಪ್ರಸಾದ ವಿತರಿಸಲಾಯಿತು.