ಜಿಲ್ಲೆ

ಹಗರಿಬೊಮ್ಮನಹಳ್ಳಿಯ ವಿವಿಧೆಡೆ ಪ್ರಸಾದ ವ್ಯವಸ್ಥೆ

ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಐದನೇ ದಿನ ಗಣೇಶ ವಿಸರ್ಜನೆ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಪಟ್ಟಣದ 25, ತಂಬ್ರಹಳ್ಳಿ ವ್ಯಾಪ್ತಿಯಲ್ಲಿ 16, ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ 10 ಸೇರಿದಂತೆ 75ಕ್ಕೂ ಹೆಚ್ಚು ಗಣೇಶನ ಮೂರ್ತಿಗಳು ವಿಸರ್ಜನೆಗೊಂಡವು. ಪಟ್ಟಣದ ರಾಮನಗರ ತೇರುಬೀದಿಯಲ್ಲಿರುವ ಬಾವಿ ಮತ್ತು ಹಳೇ ಊರಿನ ಹಳೇ ಗ್ರಾ.ಪಂ.ಕಟ್ಟಡ ಆವರಣದಲ್ಲಿ ಗಣೇಶ ವಿಸರ್ಜನೆಗೆ ಪುರಸಭೆಯಿಂದ ವ್ಯವಸ್ಥೆ ಮಾಡಲಾಗಿತ್ತು. ಹಗರಿ ಕ್ಯಾದಗಿಹಳ್ಳಿ ಸೇತುವೆ, ಬಾಚಿಗೊಂಡನಹಳ್ಳಿ ಹಿನ್ನೀರಿನ ವ್ಯಾಪ್ತಿಯಲ್ಲೂ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಸಂಘಟನೆಗಳಿಂದ ಪ್ರತಿಷ್ಠಾಪಿಸಲಾದವಿಘ್ನೇಶ್ವರನ ವಿಸರ್ಜನೆ ವೇಳೆ ವಿವಿಧ ವಾದ್ಯ ಮತ್ತು ಡಿಜೆ ಮೆರವಣಿಗೆಗೆ ಮೆರುಗು ತಂದುಕೊಟ್ಟವು. ಅಲ್ಲಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.