ಜಿಲ್ಲೆ

ಹಕ್ಕು ಪತ್ರದ ಆಧಾರದ ಮೇಲೆ ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ಪ್ರತಿಭಟನೆ

ಹಾಸನ: ರಾಜೀವ್ ಗಾಂಧಿ ವಸತಿ ನಿಗಮದ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನದ ಯೋಜನೆ ಅಡಿಯಲ್ಲಿ ರಾಮನಾಥಪುರ ಗ್ರಾಮ ಪಂಚಾಯಿತಿಯಿಂದ ನಿವೇಶನ ರಹಿತ ಜನರಿಗೆ ನೀಡಿರುವ ಹಕ್ಕು ಪತ್ರದ ಆಧಾರದ ಮೇಲೆ ಖಾತೆ ಮಾಡಿಕೊಡುವಂತೆ ಒತ್ತಾಯಿಸಿ ಫಲಾನುಭವಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಕ್ಕುಪತ್ರ ಕೊಟ್ಟು ವರ್ಷಗಳಾದರೂ ಖಾತೆ ಮಾಡಿಕೊಡದೆ ಕಾಲಹತಣ ಮಾಡುತ್ತಿದ್ದಾರೆ. ಆದ್ದರಿಂದ ನಮಗೆ ಕಾಯ್ದಿರಿಸಿರುವ ಜಾಗವನ್ನು ಶೀಘ್ರದಲ್ಲಿ ಖಾತೆ ಮಾಡದ್ದಿದ್ದಾರೆ ಗ್ರಾ.ಪಂ ಮತ್ತು ತಹಸೀಲ್ದಾರ್ ಕಛೇರಿ ಮುಂದೆ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ರಾಮನಾಥಪುರ ಗ್ರಾಮಪಂಚಾಯಿತಿಯಿಂದ 2020-21ರಲ್ಲಿ ನಿವೇಶನ ರಹಿತರ ಅರ್ಹ ಪಲಾನುಭವಿಗಳ ಪಟ್ಟಿ ತಯಾರಿಸಿ ನಂತರ ತಾಲ್ಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಎಲ್ಲಾ ಪಲಾನುಭವಿಗಳ ಪಟ್ಟಿ ಪರೀಶಿಲಿಸಿ 2020 ಅನುಮೋದನೆ ನೀಡಲಾಗಿದೆ. 2022 ರಾಮನಾಥಪುರದ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಯದಲ್ಲಿ ಹಾಲಿ ಪಂಚಾಯಿತಿ ಅಧಿಕಾರಿಗಳು ಹಾಗು ಸದಸ್ಯರು ಮತ್ತು ಶಾಸಕರು ಮತ್ತು ಮಂತ್ರಿಗಳು ಸಮ್ಮುಖದಲ್ಲಿ ಹಕ್ಕು ಪತ್ರ ವಿತರಿಸಲಾಯಿತು ಎಂದು ಹೇಳಿದರು.
ಆದರೇ ಅಂದಿನಿಂದ ಇಂದಿನವರೆಗೂ ಹಕ್ಕು ಪತ್ರ ಕೊಟ್ಟು ವರ್ಷಗಳಾದರೂ ಯಾರಿಗೂ ಖಾತೆ ಮಾಡಿಲ್ಲ. ಈ ಬಗ್ಗೆ ಹಲವಾರು ಬಾರಿ ಪಂಚಾಯಿತಿಗೆ ಹೋಗಿ ಅಧಿಕಾರಿಗಳನ್ನು ಕೇಳಿಕೊಂಡರೂ ನಮಗೆ ನಮ್ಮ ಸಮಸ್ಯೆಗೆ ಸ್ಪಂದಿಸದೆ ಬೇಜಾವಾಬ್ದಾರಿ ಉತ್ತರ ಕೊಟ್ಟು ಕಳುಹಿಸುತ್ತಿದ್ದಾರೆ. ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸದಿದ್ದರೇ ಗ್ರಾಮ ಪಂಚಾಯಿತಿಗೆ ಮತ್ತು ತಹಸೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಬಣದ ಅಧ್ಯಕ್ಷ ಚಂದ್ರಶೇಖರ್ ಬೋವಿ, ರಾಜ್ಯ ರೈತ ಬಣದ ಜಿಲ್ಲಾಧ್ಯಕ್ಷ ಸಿದ್ದೇಶ್, ಗ್ರಾಮದ ಪಾರ್ವತಿ, ವಿಜಯ, ವಸಂತ ಕುಮಾರಿ ಇತರರು ಇದ್ದರು.