ವಿಜಯನಗರ : ಹೊಸಪೇಟೆ ತಾಲೂಕಿನ ಹಂಪಿಯ ಹೇಮಕೂಟದ ಗುಡ್ಡದ ಮೇಲೆ ಚಿರತೆ ಕಂಡು ಬಂದಿದ್ದು, ಸಾರ್ವಜನಿಕರಲ್ಲಿ ಅತಂಕ ಮೂಡಿದೆ. ಕೆಲ ದಿನಗಳ ಹಿಂದೆ ಹಂಪಿ ಹಾಗೂ ಕನ್ನಡ ವಿವಿ ಜನಬಿಡಾ ಪ್ರದೇಶದ ನಡು ರಸ್ತೆಯಲ್ಲಿ ಕರಡಿಗಳು ಪ್ರತ್ಯಕ್ಷವಾಗಿದ್ದವು. ಈಗ ಚಿರತೆಯು ಸಂಜೆ ವೇಳೆ ಚಿರತೆಯು ಗುಡ್ಡದ ಮೇಲೆ ಮಲಗಿರುವುದನ್ನು ಸ್ಥಳೀಯ ನಿವಾಸಿಯೊಬ್ಬರು ಕ್ಯಾಮೆರೆದಲ್ಲಿ ಪೋಟೋ ಹಾಗೂ ವೀಡೀಯೊ ತೆಗೆದಿದ್ದಾರೆ. ಸದ್ಯ ಆ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಯಾಗಿದೆ. ಈ ಹಿಂದೆ ಹಂಪಿಯಲ್ಲಿ ಜೋಡಿಗಳು ಚಿರತೆಗಳು ಕಂಡು ಬಂದ ಹಲವು ದಿನಗಳ ಬಳಿಕ ಚಿರತೆ ಪ್ರತ್ಯಕ್ಷವಾಗಿರುವುದು ಪ್ರವಾಸಿಗರಲ್ಲಿ ಅತಂಕ ಮನೆ ಮಾಡಿದೆ.