ಜಿಲ್ಲೆ

ಹಂದಿಜೋಗಿ ಸಂಘದ ಮಾಜಿ ಅಧ್ಯಕ್ಷ: ಗೋಪಾಲ ನಿಧನ

ಹಾಸನ:ನಗರದ ಸಂತೆ ಪೇಟೆ ಹಂದಿ ಮಾಂಸದ ವ್ಯಾಪಾರಿಗಳು ಹಾಗು ಜಿಲ್ಲಾ ಹಂದಿಜೋಗಿ ಸಂಘದ ಮಾಜಿ ಜಿಲ್ಲಾಧ್ಯಕ್ಷ ಎಚ್.ಆರ್.ಗೋಪಾಲ್ (ಗೋವಿಂದಪ್ಪ) ಅವರು ಭಾನುವಾರ ರಾತ್ರಿ ನಿಧನ ಹೊಂದಿದರು.
ಎಚ್.ಆರ್.ಗೋಪಾಲ್ ಅವರು ರಾಜ್ಯ ಹಂದಿ ಬೋಗಿ ಸಂಘದ ಸಂಸ್ಟಾಪಕರು ಹಾಗೂ ಹಾಸನದಲ್ಲಿ ಹಂದಿ ಮಾಂಸ ವ್ಯಾಪಾರಸ್ಥರಾಗಿದ್ದರು, ನಗರ ನಗರಸಭೆ ಚುನಾವಣೆಗೂ ನಿಂತು ಪರಾಭವಗೊಂಡಿದ್ದರು. ಮೃತರು ಮಗ ಮತ್ತು ಮೂವರು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ನಿಧನಕ್ಕೆ ಅಖಿಲ ಕರ್ನಾಟಕ ಹಂದಿಜೋಗಿ ಸಂಘದ ರಾಜ್ಯಾಧ್ಯಕ್ಷ ರಾಜೇಂದ್ರಕುಮಾರ್, ಕಾರ್ಯದರ್ಶಿ ಮಂಡ್ಯ ರಾಜು, ಹಾಸನ ಜಿಲ್ಲಾ ಹಂದಿಜೋಗಿ ಸಂಘದ ಕಾರ್ಯದರ್ಶಿ ಎಂ.ವಿ.ಗೋವಿಂದರಾಜು, ಮುಖಂಡ ಎಂ.ವಿ.ವೆಂಕಟರಮಣಯ್ಯ, ಪಿಳ್ಳಣ್ಣ, ತಿಪಟೂರು ರಂಗಪ್ಪ, ತುಮಕೂರು ಗೋಪಿ, ಸೇರಿದಂತೆ ಜನಾಂಗದ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ನಗರದ ಬಿಟ್ಟಿಗೇನಹಳ್ಳಿ ಸ್ಮಶಾನದಲ್ಲಿ ಸೋಮವಾರ ಅಂತಿಮ ಸಂಸ್ಕಾರ ನಡೆಯಿತು.