ಜಿಲ್ಲೆ

ಹಂದಿಗಳಿಗೆ ಮುಂಜಾಗ್ರತಾ ಲಸಿಕೆ

ಬಾಗಲಕೋಟೆ: ನಗರದ ಹಳೆ ಪೆÇೀಸ್ಟ್ ಹತ್ತಿರ ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಆರ್.ಎಸ್.ಪದರಾ ನೇತೃತ್ವದಲ್ಲಿ ರೋಗ ತಪಾಸಣೆ ಅಧಿಕಾರಿ ಡಾ.ಶ್ರವಣ್ ಕುಮಾರ್ ಗದ್ದಿ ಅವರು ಹಂದಿಗಳ ರಕ್ತದ ಮಾದರಿ ಸಂಗ್ರಹಿಸಿ ರೋಗ ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು.

ಮುಂಜಾಗ್ರತಾ ಕ್ರಮಕ್ಕೆ ಲಸಿಕೆ ಹಾಕಲಾಯಿತು. ಹಾಗೂ ಎಲ್ಲಾ ಹಂದಿ ಮಾಲೀಕರಲ್ಲಿ ತಮ್ಮ ಮಾಲೀಕತ್ವದ ಹಂದಿಗಳಿಗೆ ಲಸಿಕೆ ಹಾಕಲು ತಿಳುವಳಿಕೆ ನೀಡಿ ಸದ್ಯಕ್ಕೆ ಸಾಯುತ್ತಿರುವ ಹಂದಿಗಳನ್ನು ಕಾಪಾಡಿಕೊಳ್ಳಲು ಇಲಾಖೆ ಮತ್ತು ಸ್ಥಳೀಯ ನಗರಸಭೆ ಸಿಬ್ಬಂದಿಗಳ ಸಹಕಾರದೊಂದಿಗೆ ಹಂದಿಗಳನ್ನು ಸಂರಕ್ಷಿಸಿಕೊಳ್ಳಲು ತಿಳಿಸಲಾಯಿತು.

ಪಶು ಆಸ್ಪತ್ರೆ ಸಿಬ್ಬಂದಿಗಳಾದ ಶಿವಕುಮಾರ ಸುನಗ, ವಿಜಯ ಬಿಂಗಿ ಮತ್ತು ಬಾಬುಸಾಬ್ ಡಂಗಿ ಹಾಗೂ ನಗರಸಭೆ ಸಿಬ್ಬಂದಿ ಇದ್ದರು