ಕೋ.ಶಿವಾಪುರ: ಗ್ರಾಮದಲ್ಲಿ 25 ಲ ರೂ. ವೆಚ್ಚದಲ್ಲಿ ಅಲ್ಪಸಂಖ್ಯಾತರ ಕಾಲನಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಬುಧವಾರ ಶಾಸಕ ವಿಶ್ವಾಸ ವೈದ್ಯ ಅವರು ಚಾಲನೆ ನೀಡಿದರು.
ವಿಶ್ವಾಸ ವೈದ್ಯ ಮಾತನಾಡಿ, ಗ್ರಾಮೀಣ ಭಾಗ ಮೂಲಸೌಕರ್ಯ ವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು ಹಂತ ಹಂತವಾಗಿ ಚಾಲನೆ ನೀಡಲಾಗುವುದು ಎಂದರು. ಕೆಎಂಎ್ ಸದಸ್ಯ ಶಂಕರ ಇಟ್ನಾಳ, ಎಪಿಎಂಸಿ ಸದಸ್ಯ ನೀಲಕಂಠ ಸಿದ್ದಬಸನ್ನವರ, ಪಿಡಿಒ ಸಂಕಪ್ಪ ಪಡಿ, ಕಾಂಗ್ರೆಸ್ ಕಾರ್ಯಕರ್ತರಾದ ಶಿವಲಿಂಗಯ್ಯ ಮಠಪತಿ, ಗ್ರಾಪಂ ಅಧ್ಯ ತವನಪ್ಪ ಟೋಪನ್ನವರ, ಪರಮೇಶ ಚಂದರಗಿ, ಸಿದ್ದಯ್ಯ ಪೂಜೆರಿ, ಕುಮಾರ ಟೊಪನ್ನವರ, ಮಾಹಾದೇವ ಪಲ್ಲೇದ, ಮುಗುಟಸಾಬ್ ಮುಗುಟಖಾನ್, ಮಾಹಾದೇವ ಕುಂದರಗಿ, ಶಿವಪ್ಪ ದಾಸಯ್ಯನವರ, ಗೂಡುಸಾಬ್ ಮುಗುಟಖಾನ್, ಸಿದ್ದಲಿಂಗ
ಕುಂದರಗಿ ಇತರರಿದ್ದರು.