ಜಿಲ್ಲೆ

ಹಂಡಿತವಳ್ಳಿ ಡೇರಿಗೆ ಎಚ್.ಪಿ.ಗೋಪಾಲ್ ಅಧ್ಯಕ್ಷ

ರಾವಂದೂರು: ಹಂಡಿತವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಪಿ.ಗೋಪಾಲ್, ಉಪಾಧ್ಯಕ್ಷರಾಗಿ ಎಚ್.ಪಿ.ರೇಖಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಎಚ್.ಪಿ.ಗೋಪಾಲ್, ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಪಿ.ರೇಖಾ ಹೊರತು ಬೇರ‌್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಇತಿಂದ್ರ ಅವರು ಅವಿರೋಧ ಆಯ್ಕೆ ಘೋಷಿಸಿದರು.ನಿರ್ದೇಶಕರಾದ ಯೋಗಾನಂದ, ಗೋವಿಂದ್‌ರಾಜ್, ಕುಮಾರ್, ರಾಜ್‌ಮೂರ್ತಿ, ಬಸವಶೆಟ್ಟಿ, ಗುರುಮೂರ್ತಿ, ಕಾವೇರಮ್ಮ, ಸರೋಜಮ್ಮ, ಕಾರ್ಯದರ್ಶಿ ಶಿವಮೂರ್ತಿ ಚುನಾವಣೆಯಲ್ಲಿ ಹಾಜರಿದ್ದು, ನೂತನ ಅಧ್ಯಕ್ಷರು-ಉಪಾಧ್ಯಕ್ಷರನ್ನು ಅಭಿನಂದಿಸಿದರು.


ಕಾಂಗ್ರೆಸ್ ಮುಖಂಡರಾದ ಚಿಕ್ಕೇಗೌಡ, ರವಿನಾಯಕ, ಅಣ್ಣಯ್ಯ, ಕುಮಾರ್, ವೆಂಕಟೇಶ್, ಪುಟ್ಟಸ್ವಾಮಿಶೆಟ್ಟಿ, ಅಂಬಿ ವೆಂಕಟೇಶ್, ಭಾಸ್ಕರ್, ಶ್ರೀನಿವಾಸ್, ಶಿವಣ್ಣಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ, ರಾಜಾಚಾರಿ, ಸ್ವಾಮಿಗೌಡ ಇತರರು ಇದ್ದರು.