ಗುಂಡ್ಲುಪೇಟೆ: ನಿರಂತರ ಬೀಳುತ್ತಿರುವ ಮಳೆಯಿಂದ ಕೋಡಿಬಿದ್ದ ತಾಲೂಕಿನ ಹಂಗಳ ಗ್ರಾಮದ ಎರಡು ಕೆರೆಗಳಿಗೆ ಗ್ರಾಮಸ್ಥರು ಹಾಗೂ ಶಾಸಕರು ಗಂಗಾಪೂಜೆ ನೆರವೇರಿಸಿ ಬಾಗಿನ ಸಲ್ಲಿಸಿದರು.
ಗುಂಡ್ಲು ನದಿ ಮೂಲವಾದ ಹಿರೀಕೆರೆಗೆ ಶಾಸಕ ಸಿ.ಎಸ್.ನಿರಂಜನಕುಮಾರ್ ಬಾಗಿನ ಅರ್ಪಿಸಿದರು. ಹಂಗಳದ ದೊಡ್ಡ ಕೆರೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಪ್ಪ ದಂಪತಿ ಗಂಗಾಪೂಜೆ ನೆರವೇರಿಸಿದರು. ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಬಾಗಿನ ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ನಂದೀಶ್, ಗೋವಿಂದನಾಯ್ಕ, ದೊರೆಸ್ವಾಮಿ, ನಾಗರಾಜು, ಸ್ವಾಮಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಮಹೇಶ್, ರೈತ ಮುಖಂಡ ಹಂಗಳ ಮಾಧು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಬಸವೇಶ್ ಇತರರು ಇದ್ದರು.