ಜಿಲ್ಲೆ

ಸ್ವಾವಲಂಬಿಗಳಾಗಲು ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ

ಶ್ರೀನಿವಾಸಪುರ: ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಸ್ವಾವಲಂಬಿ ಬದುಕು ಸಾಗಿಸಲು ಮತ್ತು ಮಹಿಳೆಯರನ್ನು ಸಶಕ್ತರನ್ನಾಗಿ ಮಾಡುವಲ್ಲಿ ಜ್ಞಾನವಿಕಾಸದ ಪಾತ್ರ ಮಹತ್ವದ್ದು ಎಂದು ಧರ್ಮಸ್ಥಳ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಸೀನಪ್ಪ ತಿಳಿಸಿದರು.

ಪಟ್ಟಣ ಹೊರವಲಯದ ಕನಕ ಸಭಾಭನದಲ್ಲಿ ಶನಿವಾರ ಧರ್ಮಸ್ಥಳ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿದ್ದರು. ಪ್ರಸ್ತುತ ಪ್ರಾಪಂಚಿಕ ಜ್ಞಾನ ಬ್ಯಾಂಕ್​ ವ್ಯವಹಾರಗಳ ಬಗ್ಗೆ ತಿಳಿದುಕೊಂಡು ಪ್ರಜ್ಞಾವಂತರಾಗಿದ್ದಾರೆ. ಭಾರತೀಯ ಸನಾತನ ಸಂಸತಿಯಲ್ಲಿ ಮಹಿಳೆಯರಿಗೆ ಗೌರವಯುತ ಸ್ಥಾನವಿದೆ. ಮಮತೆ, ಕರುಣೆ, ವಾತ್ಸಲ್ಯ, ತಾಳ್ಮೆ ಇವೆಲ್ಲ ಹೆಣ್ಣಿಗೆ ಗರ್ಭದಿಂದ ಬಂದ ಆಭರಣಗಳು. ಪಕೃತಿಗೂ, ಮಹಿಳೆಗೂ ಅವಿನಾನುಭಾವ ಸಂಬಂಧವಿದೆ. ನಮ್ಮ ಸಂಸತಿ, ಕುಟುಂಬ ನಿರ್ವಹಣೆ, ದುಶ್ಚಟಮುಕ್ತ ಸಮಾಜ ನಿಮಾರ್ಣ ವೈಯಕ್ತಿಕ ಶುಚಿತ್ವದ ಮನೋಭಾವನೆಯಿಂದ ಮುನ್ನಡೆದುಉತ್ತಮ ಸಮಾಜ ನಿಮಾರ್ಣಕ್ಕೆ ಮಹಿಳೆಯರ ಪಾತ್ರ ಅಗತ್ಯ. ಇವತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಅದ್ಭುತ ಸಾಧನೆ ಮಾಡುತ್ತಿದ್ದು, ಈ ಕಾರ್ಯಕ್ರಮದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ಅಖಿಲ ಭಾರತೀಯ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯೆ ಮಾಯಾ ಬಾಲಚಂದ್ರ ಮಾತನಾಡಿ, ಇವತ್ತಿನ ದಿನದಲ್ಲಿ ಸಾಲ ನೀಡುವ ನೂರಾರು ಸಂಸ್ಥೆಗಳಿವೆ. ಆದರೆ ಧರ್ಮಸ್ಥಳ ಸಂಸ್ಥೆ ಬ್ಯಾಂಕಿನಿಂದ ಸದಸ್ಯರಿಗೆ ಸಾಲ ನೀಡುವುದರ ಜತೆಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಸಮಾಜದಲ್ಲಿ ಮಾನವೀಯ ಮೌಲ್ಯಗಳು ಇನ್ನಿತರ ವಿಚಾರಧಾರೆಗಳನ್ನು ತುಂಬಿ ಪ್ರಬುದ್ಧರನ್ನಾಗಿ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಸಾಧಕಿಯರಾದ ಪುರಸಭೆಯ ಮಂಗಳ ಸತ್ಯಮೂರ್ತಿ ಹಾಗೂ ಪಾತೂರುಗಡ್ಡದ ಶಂಕರಮ್ಮ ಅವರನ್ನು ಸನ್ಮಾನಿಸಲಾಯಿತು. ತಾಪಂ ಮಾಜಿ ಸದಸ್ಯೆ ನಾಗವೇಣಿ ರೆಡ್ಡಿ, ತಾಲೂಕು ಯೋಜನಾಧಿಕಾರಿ ಪ್ರಕಾಶ್​ ಕುಮಾರ್​, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರಿಜಾ ಮತ್ತು ವಾಸುದೇವ್​ಇದ್ದರು.

ಯೋಗದಿಂದ ರೋಗ ದೂರ: ದೇವರಾಜ ಅರಸು ಕಾಲೇಜು ಆಪ್​ ನರ್ಸಿಂಗ್​ ಪ್ರಾಂಶುಪಾಲೆ ವಿಜಯಲಕ್ಷಿ$್ಮ ಮಾತನಾಡಿ, ಮಾನಸಿಕ ಆರೋಗ್ಯ ಹಾಗೂ ಭಾವನೆಗಳ ನಿಯಂತ್ರಣ ಆಗಬೇಕಾದರೆ ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮವನ್ನು ಮಹಿಳೆಯರು ರೂಢಿಸಿಕೊಳ್ಳಬೇಕು. ಪ್ರತಿದಿನ ದೇಹಕ್ಕೆ ಒಂದಷ್ಟು ವ್ಯಾಯಾಮ ಆದಾಗ ದೇಹ ಸದೃಢವಾಗುತ್ತದೆ ಮತ್ತು ರೋಗಗಳು ಬರದಂತೆ ತಡೆಯಲು ಅನುಕೂಲವಾಗುತ್ತದೆ ಎಂದರು.