ಚಿತ್ರದುರ್ಗ:ಮಹಿಳೆಯರ ಶ್ರೇಯೋಭಿವೃದ್ಧಿ ಹಾಗೂ ಸ್ವಾವಲಂಬಿ ಜೀವನಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಹತ್ವದ ಹಾಗೂ ಔಚಿತ್ಯಪೂರ್ಣ ಕಾರ‌್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ದೊಡ್ಡಸಿದ್ದವ್ವನಹಳ್ಳಿ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷ ಶ್ರೀ ರಾಜಾರಾಮ ಸ್ವಾಮೀಜಿ ಹೇಳಿದರು.
ಯೋಜನೆ ಬಿಸಿ ಟ್ರಸ್ಟ್ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದೊಡ್ಡಸಿದ್ದವ್ವನಹಳ್ಳಿ ನರಹರಿ ಸದ್ಗುರು ಆಶ್ರಮದಲ್ಲಿ ಭಾನುವಾ ರ ಏರ್ಪಡಿಸಿದ್ದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ,ಮಹಿಳೆಯ ಸ್ವಾವಲಂಬಿ ಬದು ಕಿಗೆ ಯೋಜನೆ ಅನೇಕ ಕಾರ‌್ಯಕ್ರಮಗಳು ನೆರವು ನೀಡುತ್ತಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಕಾರ‌್ಯಯೋಜನೆಗಳನ್ನು ಶ್ಲಾಘಿಸಿದರು.
ದೊಡ್ಡಸಿದ್ದವ್ವನಹಳ್ಳಿ ಗ್ರಾಪಂ ಅಧ್ಯಕ್ಷೆ ಭಾರತಿ ಆರ್.ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಯೋಧ ಬಸವರಾಜ್,ಪೂಜಾ ಸಮಿತಿ ಅಧ್ಯಕ್ಷ ಸದಾನಂದ,ಅಶೋಕ್,ಎಂ.ಡಿ.ನವಕೋಟಿ,ವೈ.ಮಹಾಂತಪ್ಪ,ಬಿ.ದುರಗೇಶಪ್ಪ,ಎನ್.ನೇತ್ರಾವತಿ,ಲತಾ,ಸಂದೀಪ್ ಮತ್ತಿತರರು ಇದ್ದರು.