ಯಾದಗಿರಿ: ತುರ್ತು ಪರಿಸ್ಥಿತಿ ದೇಶಕ್ಕೆ ಅಂಟಿದ ಕಪ್ಪು ಚುಕ್ಕೆ. ತಮ್ಮ ಸ್ವಾರ್ಥಕ್ಕಾಗಿ ದೇಶದಲ್ಲಿ ಇಂತಹ ಸ್ಥಿತಿ ನಿರ್ಮಾಣಕ್ಕೆ ಮಾಜಿ ಪ್ರಧಾನಿ ದಿ.ಇಂದಿರಾಗಾAಧಿ ಅವರೇ ಕಾರಣ ಎಂದು ವಿಧಾನ ಪರಿಷತ್ ಪ್ರತಿಪP್ಷÀ ನಾಯಕ ಛಲವಾದಿ ನಾರಾಯಾಣಸ್ವಾಮಿ ಆರೋಪಿಸಿದರು.
ನಗರದ ಲಿಂಗೇರಿ ಕೋನಪ್ಪ ಶಿP್ಷÀಣ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ೧೯೭೪-೭೫ರಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾAಧಿ ಆಯ್ಕೆ ವಿರೋಧಿಸಿ ರಾಜನಾರಾಯಣ ಎಂಬುವರು ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಎಲ್ಲಿ ನನ್ನ ಕುರ್ಚಿ, ಸಂಸದ ಸ್ಥಾನಕ್ಕೆ ಕುತ್ತು ಬರುತ್ತದೆಂದು ಸುಪ್ರೀಂಕೋರ್ಟ್ ಮೊರೆ ಹೋದಾಗ ಸಿಕ್ಕ ೨೪ ದಿನದ ಸಮಯದಲ್ಲಿ ಜಗತ್ತೇ ಕೇಳರಿಯದಂಥ ತುರ್ತು ಪರಿಸ್ಥಿತಿ(ಎಮರ್ಜೆನ್ಸಿ) ಹೇರಿ ಅಧಿಕಾರ ಉಳಿಸಿಕೊಂಡ ಅಪಕೀರ್ತಿ ಇಂದಿರಾ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಎಮರ್ಜೆನ್ಸಿ ವಿರೋಧಿಸಿದ ಸಾವಿರಾರು ಜನರನ್ನು ಎ¯್ಲೆಂದರಲ್ಲಿ ಜೈಲಿಗೆ ಹಾಕಿದರು. ಸಂವಿಧಾನವನ್ನೇ ಮುಚ್ಚಿಟ್ಟರು. ಪತ್ರಿಕಾ ಸ್ವಾತಂತ್ರö್ಯ ಕಸಿದುಕೊಂಡರು. ಸಂವಿಧಾನವನ್ನು ತಮಗೆ ಬೇಕಾದಂತೆ ತಿದ್ದಿದರು. ಇಂಥ ಕರಾಳ ಸ್ಥಿತಿ ದೇಶಕ್ಕೆ ನೀಡಿದ ಕೀರ್ತಿ ಇಂದಿರಾಗಾAಧಿ ಅವರದು. ಈ ಕರಾಳ ಇತಿಹಾಸ ಇಂದಿನ ಪೀಳಿಗೆಗೆ ತಿಳಿಯಪಡಿಸಲು ದೇಶಾದ್ಯಂತ ಇಂತಹ ಕಾರ್ಯಕ್ರಮ ನಡೆಸುತ್ತಿರುವುದಾಗಿ ಎಂದು ನಾರಾಯಣಸ್ವಾಮಿ ತಿಳಿಸಿದರು.
ಸಂಸ್ಥೆ ಕಾರ್ಯದರ್ಶಿ ಸಿದ್ರಾಮಪ್ಪಗೌಡ ಚೇಂಗಟಾ, ಬಿಜೆಪಿ ಜಿ¯್ಲÁಧ್ಯP್ಷÀ ಬಸವರಾಜಪ್ಪ ವಿಭೂತಿಹಳ್ಳಿ, ಮಾಜಿ ಜಿಲ್ಲಾಧ್ಯP್ಷÀ ಅಮೀನರಡ್ಡಿ ಯಾಳಗಿ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್, ಕಾಲೇಜು ಪ್ರಾಂಶುಪಾಲ ಗುರಪ್ಪಚಾರ್ಯ ವಿಶ್ವಕರ್ಮ, ಸಿಬ್ಬಂದಿ ಸವಿತಾ, ಅನನ್ಯಾ, ಬಸವರಾಜ ಜುಗೇರಿ, ಸತೀಶಕುಮಾರ, ರಮಾ ಕುಲಕರ್ಣಿ ಇತರರಿದ್ದರು.
ಕಳೆದ ೧೧ ವರ್ಷಗಳಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂಬ ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಗಮನಿಸಿದರೆ ಅಂದು ನಿಜವಾದ ತುರ್ತು ಪರಿಸ್ಥಿತಿ ಇತ್ತು ಎಂಬುದನ್ನು ಒಪ್ಪಿಕೊಂಡAತಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಗುಡುಗಿದರು. ಖರ್ಗೆ ಇಂಥ ಹೇಳಿಕೆ ಬದಲು ಅಂದು ಇಂದಿರಾಗಾAಧಿ ಮಾಡಿದ ತಪ್ಪಿಗೆ ದೇಶದ ಜನತೆಗೆ P್ಷÀಮೆ ಕೇಳಿದ್ದರೆ ಇನ್ನಷ್ಟು ದೊಡ್ಡ ವ್ಯಕ್ತಿಯಾಗುತ್ತಿದ್ದರು ಎಂದು ಲೇವಡಿ ಮಾಡಿದರು.
ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿರುವ ಹೊನಗೇರಾ ಗ್ರಾಮದ ಶಿವಲಿಂಗ ಕುಂಬಾರ ಮನೆಗೆ ವಿಧಾನ ಪರಿಷತ್ ಪ್ರತಿಪP್ಷÀ ನಾಯಕ ಛಲವಾದಿ ನಾರಾಯಾಣಸ್ವಾಮಿ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತ ಶಿವಲಿಂಗನದ್ದು ಬಡ ಕುಟುಂಬ. ಕೂಲಿ ಮಾಡಿ ಬದುಕಲು ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ ಕಾಲ್ತುಳಿತದಲ್ಲಿ ಶಿವಲಿಂಗನ ಕಳೆದುಕೊಂಡ ಈ ಕುಟುಂಬಕ್ಕೆ ಸರ್ಕಾರಿ ಭೂಮಿ, ಪಂಚಾಯಿತಿಯಿAದ ಮನೆ ಹಾಗೂ ಇರುವ ಇನ್ನೊಬ್ಬ ಮಗನಿಗೆ ನೌಕರಿ ಕೊಡಿಸಬೇಕೆಂದು ಗ್ರಾಮಸ್ಥರು ಛಲವಾದಿ ಮೇಲೆ ಒತ್ತಡ ಹೇರಿದರು. ಇನ್ನು ಊರಲ್ಲಿ ಸ್ಮಶಾನಭೂಮಿ ಇಲ್ಲ. ಕಾರಣ ಅದರ ವ್ಯವಸ್ಥೆ ಮಾಡಿಕೊಡಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿದರು. ತಕ್ಷಣವೇ ಜಿ¯್ಲÁಧಿಕಾರಿ ಡಾ.ಸುಶೀಲಾ ಜತೆ ದೂರವಾಣಿಯಲ್ಲಿ ಮಾತನಾಡಿದ ಛಲವಾದಿ, ಗ್ರಾಮಸ್ಥರ ಎಲ್ಲ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲï, ಪ್ರಮುಖರಾದ ಪರಶುರಾಮ ಕುರಕುಂದಾ, ಮಲ್ಲಿಕಾರ್ಜುನ ಹೊನಿಗೇರಿ, ಶ್ರೀಧರ ಸಾಹುಕಾರ, ನರಸಿಂಹಲು ನಿರೇಟಿ, ಗುರು ಪೊಲೀಸ್ ಪಾಟೀಲ್, ಶರಣಪ್ಪ ಮೋಟ್ನಳ್ಳಿ, ಮೌನೇಶ ಬೆಳಿಗೇರ, ಚಂದುಲಾಲï ಚೌಧರಿ, ನಾಗಪ್ಪ ಭೋವಿ, ವೆಂಕಟೇಶ ಗೋಸಿ, ಶಿವಕುಮಾರ ಕೋಟಿಗೆರಿ, ಸಾಬಣ್ಣ ಗೋಡೆಬಲುರ ಇತರರಿದ್ದರು.