ಹಾಸನ: ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ ದೇಶ ಭಕ್ತಿ ಮತ್ತು ರಾಷ್ಟ್ರೀಯತೆ ತಿಳಿದರೆ ಒಂದು ಕ್ಷಣ ರೋಮಾಂಚನ ಆಗುತ್ತದೆ ಎಂದು ಶಾಸಕ ಪ್ರೀತಂ ಜೆ ಗೌಡ ಅಭಿಪ್ರಾಯಟ್ಟರು.
ನಗರದ ಬಿ.ಎಂ ರಸ್ತೆ ಮೈದಾನದಲ್ಲಿ ಶನಿವಾರ ಸಂಜೆ ಪ್ರೀತಂ ಜೆ ಗೌಡ ಸ್ನೇಹ ಬಳಗ ಮತ್ತು ಐಡಿಯಲ್ ಪ್ಲೇ ಅಬಾಕಸ್ ವತಿಯಿಂದ ನಡೆದ ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ 126ನೇ ಜಯಂತಿ ಅಂಗವಾಗಿ ಅಂತರ್ ಶಾಲಾ ಸಮೂಹ ನೃತ್ಯ ಸ್ಪರ್ಧೆ ಹಾಗೂ ಚಿತ್ರಕಲೆ, ಗಣಿತ, ಪ್ರಬಂಧ, ಉತ್ತಮ ಕೈ ಬರಹ, ಸ್ಪೆಲ್ ಬಿ ಸ್ಪರ್ಧೆಗಳ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು. ಸ್ವಾತಂತ್ರೃ ಸಂಗ್ರಾಮದ ಕಿಚ್ಚನ್ನು ಹಚ್ಚಿದವರು ನಮ್ಮ ನೇತಾಜಿ. ಬ್ರಿಟಿಷರು ಕೇವಲ ಶಾಂತಿ ರೂಪದಲ್ಲಿ ಸ್ವಾತಂತ್ರೃ ಕೇಳಿದರೆ ಕೊಡುವುದಿಲ್ಲ ಎಂದು ತಿಳಿದು ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದ ಮಹಾನ್ ವ್ಯಕ್ತಿಗಳ ಸಾಲಲ್ಲಿ ಸುಭಾಷ್ ಚಂದ್ರಬೋಸ್ ಅವರ ಸಹ ಒಬ್ಬರು. ಅವರ ಜೀವನ ಚರಿತ್ರೆಯನ್ನು ತಿಳಿದರೆ ಒಂದು ಕ್ಷಣ ರೋಮಾಂಚನವಾಗುತ್ತದೆ.
ಶತಮಾನಗಳಿಂದ ಭಾರತ ದೇಶ ಬ್ರಿಟಿಷರ ದುರಾಡಳಿತದಿಂದ ಇದ್ದು, ಅದರಿಂದ ಮುಕ್ತಿಕೊಡಿಸುವಲ್ಲಿ ಇವರ ಹೋರಾಟ ಅಪಾರ. ಕೆಲ ದೇಶಗಳು ಪಾಶ್ಚಿಮತ್ಯದಿಂದ ತತ್ತರಿಸಿ ಮೂಲ ಸ್ವರೂಪವನ್ನು ಕಳೆದುಕೊಂಡಿದೆ. ಆದರೆ ಭಾರತ ದೇಶ ನೂರಾರು ವರ್ಷಗಳ ಕಾಲ ಬ್ರಿಟಿಷರ ಕೈವಶವಾಗಿದ್ದರು ತನ್ನ ಸ್ವಾಮ್ಯತೆಯನ್ನು ಉಳಿಸಿಕೊಂಡು ಬಂದಿದೆ ಎಂದರೆ ಅದು ಈ ಮಣ್ಣಿನ ಗುಣ. ಈ ಮಣ್ಣನ ಗುಣ ಸ್ವಾಮಿ ವಿವೇಕನಂದರಿಂದ ನೇತಾಜಿ ಸುಭಾಷ್ ಚಂದ್ರ ಬೋಸ್, ಹಾಗೂ ನರೇಂದ್ರ ಮೋದಿಯವರಿಂದ ಈ ವರೆಗಿನ ಯುವಕರ ತನಕ ಆ ಪ್ರೇರಣೆ ಮುಂದುವರೆದಿದೆ ಎಂದರು.
ಮಕ್ಕಳಿಗೆ ಪ್ರಶಸ್ತಿ ಮುಖ್ಯವಲ್ಲ ಬೆನ್ನು ತಟ್ಟುವ ಕೆಲಸವಾಗಬೇಕು ಎಂದು ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳ ನಿತ್ಯ ವಿದ್ಯಾಬ್ಯಾಸದೊಂದಿಗೆ ಅವರಲ್ಲಿನ ಕೌಶಲ್ಯಗಳನ್ನು ಹೊರವುದು ಬಹುಮುಖ್ಯ. ಶಿಕ್ಷಣ ಸೇರಿದಂತೆ ವಿವಿಧ ಕೌಶಲ್ಯಗಳನ್ನು ಹೊರ ತರುವಂತಹ ಇಂತಹ ಕಾರ್ಯಕ್ರಾಮ, ಪ್ರೋತ್ಸಹ ನೀಡಲು ಪ್ರೋತ್ಸವ ಧನ ಹೀಗೆ ಇಂತಹ ಕಾರ್ಯಕ್ರಮಗಳು ಪ್ರತಿವರ್ಷವು ಆಯೋಜಿಸಲಾಗುತ್ತದೆ. ಅದಕ್ಕೆ ಪೋಷಕರ ಸಹಕಾರ ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಲಾಟ ಮೂರ್ತಿ, ನಗರ ಸಭೆ ಅಧ್ಯಕ್ಷ ಮೋಹನ್ ಹಾಜರಿದ್ದರು.