ಜಿಲ್ಲೆ

ಸ್ವಾಮೀಜಿಗಳಿಗಿಲ್ಲ ಸ್ವಾತಂತ್ರ‍್ಯ ; ದಿಂಗಾಲೇಶ್ವರ ಆತಂಕ

ಬಾಗಲಕೋಟೆ: ತಂದೆ, ತಾಯಿ, ಬಂಧು, ಬಳಗ ಎಲ್ಲವನ್ನು ಬಿಟ್ಟು ಬಂದ ಮೇಲೆಯೂ ರಾಜಕಾರಣಿಗಳಿಗೆ ಹೆದರಿ ಸ್ವಾಮೀಜಿಗಳು ಬಾಳೆ ಮಾಡುವಂತಾಗಿದೆ. ಇನ್ನೊಬ್ಬರ ಕೈಯಾಗ ಬಾಳೆ ಮಾಡೋದು ಅಂದ್ರ ಇದೆಂತರಹ ಸನ್ಯಾಸತ್ವ ಎಂದು ಶಿರಹಟ್ಟಿ-ಬಾಲೆ ಹೂಸೂರಿನ ದಿಂಗಾಲೇಶ್ವರ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ನವನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂ.ಸಿದ್ದಲಿಂಗ ಮಹಾಶಿವಯೋಗಿಗಳ ಜನ್ಮ ಶತಮಾನೋತ್ಸವ, ಕಲ್ಯಾಣ ಪರ್ವ, ೬೩ ಶಿವ ಶರಣರ ಪಾದಪೂಜೆ ಕಾರ್ಯಕ್ರಮದಲ್ಲಿ ಮಠಾಽÃಶರ ಸದ್ಯ ಪರಿಸ್ಥಿತಿ ಬಗ್ಗೆ ಅಸಮಾಧಾನ ಹೊರ ಹಾಕಿದರು.

ರಾಜಕಾರಣಿಗಳಿಗೆ ಹೆದರಿ ಸ್ವಾಮಿಗಳು ಬಾಳೆ ಮಾಡುವಂತಾಗಿದೆ. ತಂದೆ, ತಾಯಿ, ಬಂಧು, ಬಳಗ ಎಲ್ಲವನ್ನು ಬಿಟ್ಟು ಬಂದ ಮೇಲೆ ಇನ್ನೊಬ್ಬರ ಕೈಯಾಗ ಬಾಳೆ ಮಾಡೋದು ಅಂದ್ರ ಇದೆಂತಹ ಸನ್ಯಾಸತ್ವ. ಸ್ವಾಮಿಗಳನ್ನು ರಾಜಕಾರಣಿಗಳು ತಮ್ಮ ಕೈಯಲ್ಲಿ ಇಟ್ಕೊಂಡು ಹೋಗುವ ವ್ಯವಸ್ಥೆ ಆಗುತ್ತಿದೆ. ಇಂತಹ ರಾಜಕಾರಣಿಗಳು ಈ ನಾಡಿನಲ್ಲಿ ಹುಟ್ಟಿದ್ದರಿಂದ ಸ್ವಾಮಿಗಳು ಸ್ವಾತಂತ್ರ‍್ಯ ಕಳೆದುಕೊಂಡಿz್ದÁರೆ. ರಾಜಕಾರಣಿಗಳು ತಮ್ಮ ಪಕ್ಷದ ತಿಂಡಿಯನ್ನ ಮಠದಲ್ಲಿ ತೀರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕೆಲವು ಸ್ವಾಮೀಜಿಗಳು ರಾಜಕಾರಣಿಗಳ ಮನೆತ ಕಸ ಹೊಡೆಯುವ ಆಳಿಗಿಂತ ಕನಿಷ್ಟ ಆಗುವ ವ್ಯವಸ್ಥೆ ನಿರ್ಮಾಣ. ಸನ್ಯಾಸಿಗಳು ಯಾವಾಗಲೂ ಆಽÃನವಾಗಿ ಕೆಲಸ ಮಾಡುವಂತಾಗಬಾರದು. ಸ್ವಾಮಿಗಳು ಸಂಪೂರ್ಣ ಸ್ವಾತಂತ್ರ‍್ಯ ತೆಗೆದುಕೊಂಡು ಎಲ್ಲರನ್ನ ಸಮತಾ ದೃಷ್ಟಿಯಲ್ಲಿ ಇಟ್ಟುಕೊಂಡು ಹೋಗಲಿ. ಸ್ವಾಮಿಗಳೇ ಮುಲಾಜಿಗೆ ಒಳಗಾದರೆ ಏಕತೆ, ಸಮಾನತೆ ಬರಲ್ಲ ಎಂದು ಹೇಳಿದರು.