ಹಾಸನ: ಸ್ವಾಮೀ ವಿವೇಕಾನಂದರ ಆದರ್ಶಗಳು ಇಂದಿನ ಯುವಜನಾಂಗಕ್ಕೆ ಮಾದರಿಯಾಗಲಿದೆ ಹಾಗೂ ಅವರು ಬದುಕಿದ ಹಾದಿ ಮತ್ತು ಬೋಧನೆಗಳು ನಮಗೆಲ್ಲಾ ಸ್ಪೂರ್ತಿಯಾಗಿದೆ ಎಂದು ಹಿಮ್ಸ್ ನಿರ್ದೇಶಕ ಹಾಗೂ ಡೀನ್ ಡಾ.ಎಸ್.ವಿ.ಸಂತೋಷ್ ಎಂದು ತಿಳಿಸಿದರು.
ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಮತ್ತು ರಾಜೀವ್ ಗಾಂಧಿ ವಿಜ್ಞಾನಗಳ ವಿಶ್ವವಿದ್ಯಾಲಯ ಇದರ ನಿರ್ದೇಶನದಂತೆ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಯುವ ಸಪ್ತಾಹ ಕಾರ್ಯಕ್ರಮದ ಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದು ರಕ್ತದಾನ ಶಿಬಿರದಲ್ಲಿ ಹಾಗೂ ಉಪನ್ಯಾಸ ಕಾರ್ಯಕ್ರಮ ಭಾಗವಹಿಸಿ ಮಾತನಾಡಿದರು.
ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರೇಖಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು ಹಾಗೂ ಪುಸ್ತಕಗಳನ್ನು ಓದಿ ಜ್ಞಾನವನ್ನು ಸಂಪಾದಿಸುವುದರಿಂದ ಜೀವನದಲ್ಲಿ ಯಶಸ್ಸನ್ನು ಕಾಣಬಹುದು ಎಂದರು.
ಟ್ರಾಫೀಕ್ ಪೋಲಿಸ್ ಇನ್ಸ್‌ಪೆಕ್ಟರ್ ಎಸ್.ಎಂ.ವೀಣಾ ಮಾತನಾಡಿದ ಅವರು, ರಸ್ತೆ ಸುರಕ್ಷತೆಯ ಕುರಿತು ಮಾತನಾಡಿ ರಸ್ತೆ ಅಪಘಾತಗಳನ್ನು ತಡೆಗಟ್ಟುವಲ್ಲಿ ಮುನ್ನೆಚರಿಕೆಗಳನ್ನು ಪಾಲಿಸುವುದು ಅತ್ಯಗತ್ಯ ಎಂದರು.
ನಿವೃತ್ತ ಪ್ರಾಂಶುಪಾಲರು ಪ್ರೋ. ಎಚ್.ಆರ್.ಸುಲೋಚನ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ ಜೀವನ ಶೈಲಿ ಹಾಗೂ ಆಧ್ಯಾತ್ಮೀಕ ವಿಚಾರಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರು ಡಾ.ಎಚ್.ಸಿ.ಲೋಕೇಶ್, ಶುಶ್ರೂಷಕ ಅಧೀಕ್ಷಕ ನಿರ್ಮಲ ಕುಮಾರಿ, ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತ್ ಅಧ್ಯಕ್ಷ ಯು.ಜೆ.ಮಲ್ಲಕಾರ್ಜುನ್, ಕ್ಯಾನ್ಸರ್ ತಜ್ಞರು ಡಾ.ಸಿ.ಎನ್.ಜಗದೀಶ್, ರಕ್ತನಿಧಿ ವಿಭಾಗ ಡಾ. ನಾಗಲಕ್ಷ್ಮೀ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು ನಿಚಿತಾ ಕುಮಾರಿ, ಹಿಮ್ಸ್ ಅಧ್ಯಕ್ಷ ಡಾ.ಜಿ.ಕಾವ್ಯಶ್ರೀ. ಉಪಸ್ಥಿತರಿದ್ದರು.