ಜಿಲ್ಲೆ

ಸ್ವಾಭಿಮಾನದಿಂದ ಜೀವನ ಸಾಗಿಸಿ

ಯಾದಗಿರಿ: ದೇವರು, ಸ್ವರ್ಗಲೋಕ, ಹತ್ತಾರು ನಗರ ಮತ್ತು ದೇವಾಲಯಗಳ ನಿಮರ್ಾಪಕರು ವಿಶ್ವಕರ್ಮರು ಅವರೇ ಎಲ್ಲರ ಸೃಷ್ಟಿಕರ್ತರು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀವಿಶ್ವಕರ್ಮ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಇಂದ್ರ, ಸೂರ್ಯ ಮತ್ತು ಅಗ್ನಿಯ ಗುಣವಾಗಿ ವಿಶ್ವಕರ್ಮರ ಎಂದು ದೈವ ಕಾಲದ ಪುರಾಣಗಳಲ್ಲಿ ಉಲ್ಲೇಖವಿದೆ. ಎಲ್ಲರಿಗೂ ತಿಳಿದಿರುವ ಪುಷ್ಪಕ ವಿಮಾನದ ನಿಮರ್ಾತೃ ಕೂಡ ಶ್ರೀ ವಿಶ್ವಕರ್ಮರು. ಆದ್ದರಿಂದ ದೈವಿಕ ಪರಂಪರೆಯಲ್ಲಿ ಅವರ ಪಾತ್ರ ಮುಖ್ಯವಾಗಿತ್ತು ಎಂದು ಬಣ್ಣಿಸಿದರು.

ವಿಶ್ವಕರ್ಮ ಸಮುದಾಯ ಮಿತಭಾಷಿಗಳು. ಪಾರಂಪರವಾಗಿ ತಮ್ಮ ಕುಲಕಸುಬನ್ನು ಶೃದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಸಕರ್ಾರ ಸಮುದಾಯದ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಯೋಜನೆಗಳ ಲಾಭ ಪಡೆದು ಸ್ವಾಭಿಮಾನದಿಂದ ಜೀವನ ಸಾಗಿಸುವಂತೆ ಸಲಹೆ ನೀಡಿದರು.
ಎಂಎಲ್ಸಿ ಛಲುವಾದಿ ನಾರಾಯಾಣಸ್ವಾಮಿ ಮಾತನಾಡಿ, ನಾವು ಪೂಜಿಸುವ ದೇವಾನುದೇವತೆಗಳಿಗೆ ಆಕಾರ ನೀಡಿ, ದೇವರುಗಳಿಗೆ ಶಕ್ತಿ ತುಂಬಿ ಎಲ್ಲರಲ್ಲಿ ಭಕ್ತಿ, ಭಾವನೆ ಮುಡಿಸಿದವರು ಶ್ರೀ ವಿಶ್ವಕರ್ಮರು. ಪ್ರಧಾನಿ ನರೇಂದ್ರ ಮೋದಿ ಅವರು 13 ಸಾವಿರ ಕೋಟಿ ರೂ. ವಿಶ್ವಕರ್ಮ ಜನಾಂಗದ ಅಭ್ಯುದಯಕ್ಕೆ ಮಿಸಲಿಟ್ಟು ಸಾಲ ಸೌಲಭ್ಯ ಸೇರಿ ಹಲವು ಅನುಕೂಲತೆಗಳನ್ನು ಕಲ್ಪಿಸಿದ್ದಾರೆ ಎಂದರು.