ಜಿಲ್ಲೆ

ಸ್ವಾಭಿಮಾನ ರಾಜಕಾರಣ ಮಾಡಿದ ಮಾಯಾವತಿ

ಚಾಮರಾಜನಗರ: ಬಹುಜನ ಸಮಾಜ ಪಕ್ಷದ ವರಿಷ್ಠರು ಹಾಗೂ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ದೇಶದಲ್ಲಿ ಸ್ವಾಭಿಮಾನದ ರಾಜಕಾರಣಕ್ಕೆ ಹೆಸರಾಗಿದ್ದಾರೆ ಎಂದು ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ ಹೇಳಿದರು.

ನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ಪರಿವರ್ತನ ಅಧ್ಯಯನ ಕೇಂದ್ರದಲ್ಲಿ ಬಹುಜನ ಸಮಾಜ ಪಕ್ಷ, ಚಾಮರಾಜನಗರ ವ್ಯದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧನಾ ಆಸ್ಪತ್ರೆ, ರಕ್ತನಿಧಿ ಕೇಂದ್ರ ಹಾಗೂ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಜನಕಲ್ಯಾಣ್ ದಿವಸ್ ಅಂಗವಾಗಿ ಬುಧವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಾಗೂ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದಾದಾಸಾಹೇಬ್ ಕಾಶ್ಮಿರಾಂ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿದ್ದ ಪ್ರಬುದ್ಧ ಭಾರತ ನಿರ್ಮಾಣದ ಕನಸನ್ನು ನನಸು ಮಾಡಲು ತಮ್ಮ ವೈಯಕ್ತಿಕ ಜೀವನ ತ್ಯಾಗ ಮಾಡಿದರು. ಇಡೀ ರಾಷ್ಟ್ರದ ಎಸ್‌ಸಿ,ಎಸ್‌ಟಿ, ಓಬಿಸಿ, ಧಾರ್ಮಿಕ ಅಲ್ಪಸಂಖ್ಯಾತರನ್ನು ಒಗ್ಗೂಡಿಸಿ ಸ್ವಾಭಿಮಾನದ ರಾಜಕಾರಣ ಮಾಡಿದರು. ಪ್ರಸ್ತುತ ನಾವೆಲ್ಲರೂ ಮಾಯಾವತಿ ಅವರ ಬೆಂಬಲಕ್ಕೆ ನಿಂತು, ಅವರ ಹೋರಾಟಕ್ಕೆ ಸಾಥ್ ನೀಡಬೇಕಿದೆ. ದೇಶಕ್ಕೆ ತುರ್ತಾಗಿ ಮಾಯಾವತಿ ಅವರ ಆಡಳಿತ ಅಗತ್ಯವಾಗಿದೆ ಎಂದು ಹೇಳಿದರು.

ಉತ್ತರಪ್ರದೇಶದಲ್ಲಿ ನಾಲ್ಕು ಬಾರಿ ಮಾಯಾವತಿ ಮುಖ್ಯಮಂತ್ರಿಯಾಗಿ ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ಶ್ರಮಿಸಿದರು. ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಅದಕ್ಕಾಗಿ ಮಾಯಾವತಿ ಅವರು ದೇಶದ ಪ್ರಧಾನಿ ಆಗಬೇಕು. ಆ ನಿಟ್ಟಿನಲ್ಲಿ ಮೂಲನಿವಾಸಿ ಬಹುಜನರು ಅರ್ಥಮಾಡಿಕೊಂಡು ಬಹುಜನ ಸಮಾಜ ಪಕ್ಷವನ್ನು ಬೆಂಬಲಿಸುವ ಮೂಲಕ ಅವರ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕು. ಎಂದರು.

ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ ಮಾತನಾಡಿ,ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತಿಯಾದ ಮಾಯಾವತಿ ಅವರ ಹುಟ್ಟುಹಬ್ಬದ ಅಂಗವಾಗಿ ದೇಶಾದ್ಯಂತ ಜನಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಉಸ್ತುವಾರಿಗಳಾದ ಅಮಚವಾಡಿ ಪ್ರಕಾಶ್, ಚಂದಕವಾಡಿ ರಾಜಶೇಖರ್, ಜಿಲ್ಲಾ ಸಂಯೋಜಕ ವಕೀಲ ಪುಟ್ಟಸ್ವಾಮಿ ರಾಮಸಮುದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಪಿ.ಮಹೇಶ್, ಬಿಸಲವಾಡಿ ಗ್ರಾ.ಪಂ ಅಧ್ಯಕ್ಷ ಬಾಲರಾಜ್, ಕಾರ್ಯದರ್ಶಿ ಅಭಿ ಅರಳೀಪುರ, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಜಿಲ್ಲಾ ಕಚೇರಿ ಕಾರ್ಯದರ್ಶಿ ಚಂದಕವಾಡಿ ಕುಮಾರಸ್ವಾಮಿ, ಬಿವಿಎಫ್ ಜಿಲ್ಲಾ ಸಂಯೋಜಕ ಜಯಸಿದ್ದಾರ್ಥ, ತಾಲೂಕ ಉಪಾಧ್ಯಕ್ಷ ರಾದ ಗಿರೀಶ್ ಯಲಕ್ಕೂರು, ಮಹೇಶ್ ಶಿವಪುರ, ದೇವಾಲಪುರ ಶಿವಣ್ಣ, ಪ್ರಯೋಗಾಲಯದ ತಂತ್ರಜ್ಞರಾದ ಡುಜಾನ್, ಸತ್ಯ, ಶುಶ್ರೂಷಕ ಅಧಿಕಾರಿಗಳಾದ ಡಯಾನ, ಸರಸ್ವತಿ , ಸಹಾಯಕಿ ಚಾಂದಿನಿ, ಅಲೆಗ್ಸಾಂಡರ್ ಹಾಜರಿದ್ದರು.