ಪಾದಯಾತ್ರೆ ಕೋರ್ಟ್ ವೃತ್ತ, ಮೆಕ್ಕೆ ವೃತ್ತ, ಹಳೇ ಬಸ್‍ನಿಲ್ದಾಣ, ಕಾಲೇಜು ವೃತ್ತ ಹಾಗೂ ಎಂಜಿ ರಸ್ತೆಲ್ಲಿ ಪಾದಯಾತ್ರೆ ಸಾಗಿ, ಗಾಂಧಿವನದಲ್ಲಿ ಅಂತ್ಯಗೊಂಡಿತು. ದಾರಿಯುದ್ದಕ್ಕೂ ್ಲ ಸ್ವಚ್ಛತೆ, ಕರೊನಾ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಉಪ ನಿರ್ದೇಶಕ ಕೆ.ಎನ್.ಮಂಜುನಾಥ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕ ವಿ.ಬಾಬು, ಗೋಪಾಲರೆಡ್ಡಿ, ನೆಹರು ಯುವ ಕೇಂದ್ರದ ಅಧಿಕಾರಿ ಎಸ್.ಸರಣ್ಯಾ, ಕಾರ್ಯಕ್ರಮ ಸಂಘಟಕ ಪ್ರವೀಣ್ ಕುಮಾರ್,ಎನ್.ಎಸ್.ಎಸ್‍ನ ನೋಡಲ್ ಅಧಿಕಾರಿ ಎ.ಆರ್.ಹರೀಶ್ ಇತರರಿದ್ದರು.
ಬ್ರಿಟೀಷರ ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಪಾದಯಾತ್ರೆ ಮೂಲಕ ಗಾಂಧೀಜಿ ಜನರನ್ನು ಎಚ್ಚರಿಸುತ್ತಿದ್ದರು. ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಯುವಕರಲ್ಲಿ ಹೋರಾಟದ ಕಿಚ್ಚು ಹಚ್ಚಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದರು. ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನಗಳಿಂದಾಗಿ ಬ್ರಿಟೀಷರ ಆಳ್ವಿಕೆಯಿಂದ ಭಾರತಕ್ಕೆ ಮುಕ್ತಿ ದೊರೆಯಿತು. ಇಂದು ನಾವೆಲ್ಲರೂ ಶಾಂತಿಯಿಂದಿರಲು ಸ್ವಾತಂತ್ರ ಹೋರಾಟಗಾರ ಶ್ರಮವೇ ಕಾರಣ ಎಂದು ನುಡಿದರು.
ಯುವಜನ ವ್ಯವಹಾರಗಳ ಕ್ರೀಡಾಸಚಿವಾಲಯ ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ನಗರಸಭೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ರಾಷ್ಟ್ರೀಯ ಸೇವಾ ಯೋಜನೆ, ಜಿಲ್ಲೆಯ ಯುವಕ ಸಂಘಗಳ ಆಶ್ರಯದಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ನ್ಯಾಯಾಲಯ ಆವರಣದಿಂದ ಎಂ.ಜಿ ರಸ್ತೆಯ ಗಾಂಧಿ ವನದ ವರೆಗಿನ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ದೇಶದ ಯುವ ಜನರಿಗೆ ಇತಿಹಾಸ ನೆನಪಿಸುವ ಕಾರ್ಯವಾಗಿದೆ ಎಂದರು.
75ನೇ ಸ್ವಾತಂತ್ರ ಅಮೃತ ಮಹೋತ್ಸವ ಕೇವಲ ಸಂಭ್ರಮಾಚಾರಣೆ ಅಲ್ಲ, ವೈಭವೀಕರಣವೂ ಅಲ್ಲ, ಸ್ವಾತಂತ್ರ್ಯ ಭಾರತದ ಹಿಂದೆ, ಈಗ ಮತ್ತು ಮುಂದೆ ಭಾರತದ ಎತ್ತ ಸಾಗುತ್ತಿದೆ ಎಂದು ತುಲನೆ ಮಾಡಿ ದೇಶದ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸಬೇಕೆಂದು ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್ ಹೇಳಿದರು.
ವಿಜಯವಾಣಿ ಸುದ್ದಿಜಾಲ ಕೋಲಾರ