ಬಸವಕಲ್ಯಾಣ: ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜರ (ನಿರಗುಡಿ ಮುತ್ತ್ಯಾ) ನೇತೃತ್ವದಲ್ಲಿ ಸಸ್ತಾಪುರ ಬಂಗ್ಲಾ ಸಮೀಪದ ಬಸಪ್ಪ ಹೊಳಕುಂದೆ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬುಜಗಜೀವನ ರಾಮ್ ಜಯಂತಿ ಹಾಗೂ ಸಾಮೂಹಿಕ ವಿವಾಹ ಸಂಭ್ರಮದಿಂದ ಜರುಗಿತು.
ಜಯಂತಿ ನಿಮಿತ್ತ ದೇಶಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಕನರ್ಾಟಕ ಮತ್ತು ನೆರೆ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರ ಪ್ರದೇಶದ ವಿವಿಧೆಡೆಯಿಂದ ಆಗಮಿಸಿದ ಸಾವಿರಾರು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪ್ರಮುಖರು ಮಾತನಾಡಿ ಡಾ.ಬಾಬೂಜಿ ಜೀವನ, ಸಾಧನೆ, ದೇಶಕ್ಕೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಮಹಾತ್ಮರು, ಮಹಾಪುರುಷರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಿದೆ ಎಂದರು.
ಸಮಿತಿ ರಾಷ್ಟ್ರೀಯ ವಕ್ತಾರ ವೈಜನಾಥ ಝಳಕಿ ಮಾತನಾಡಿ, ಹವಾ ಮಲ್ಲಿನಾಥ ಮಹಾರಾಜರು ಸಮಿತಿ ಮೂಲಕ ದೇಶದ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬಲಿಷ್ಠ, ಭವ್ಯ ಭಾರತಕ್ಕಾಗಿ ಸರ್ವಸ್ವ ತ್ಯಾಗ ಮಾಡಿದ ಸ್ವಾತಂತ್ರೃ ಹೋರಾಟಗಾರರ, ಮಹಾನ್ ನಾಯಕರ ಜಯಂತಿ ಹಾಗೂ ಪುಣ್ಯಸ್ಮರಣೆಗಳನ್ನು ಪೂಜ್ಯರು ಆಚರಣೆ ಮಾಡುತ್ತಿದ್ದಾರೆ. ಮಹಾತ್ಮರಿಗೆ ಯಾವುದೇ ಜಾತಿ, ಪಂಗಡಕ್ಕೆ ಸೀಮಿತ ಮಾಡಬಾರದು. ಅವರು ನಮ್ಮ ದೇಶದ ಸರ್ವರ ನಾಯಕರು ಎಂದು ಭಾವಿಸಿ ಎಲ್ಲರೂ ಸೇರಿ ಜಯಂತಿ ಹಾಗೂ ಪುಣ್ಯಸ್ಮರಣೆ ಆಚರಣೆ ಮಾಡುವಂತೆ ಕರೆ ನೀಡಿದರು.
ಸಮಿತಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಗುಂಡು ರೆಡ್ಡಿ, ಪ್ರಮುಖರಾದ ಶಹಾಜಿರಾವ ಪಾಟೀಲ್, ಲೋಕೇಶ್ ಮದಕಟ್ಟಿ, ಬಸವರಾಜ ವಡ್ಡನಕೇರಿ, ಮಂಗಲ ಕಾರ್ಯಾಲಯ ಮಾಲೀಕ ಸೋಮಶೇಖರ ಹೊಳಕುಂದೆ, ವಿಜಯಕುಮಾರ ಅಡಕಿ, ಪ್ರಕಾಶ ಮೂಲಭಾರತಿ, ದಿಲೀಪಕುಮಾರ, ಬಾಬು ಹೊನ್ನಾನಾಯಕ, ಪಪ್ಪು ಪಾಟೀಲ್, ಸತೀಶ ರಂಜೇರಿ, ಉಲ್ಲಾಸ ಮೊಳಕೇರಾ, ಶರಣಕುಮಾರ ನವಣಿ, ಧೂಳಪ್ಪ ಬೇಲೂರು, ಸಂತೋಷ ಅಳೆ, ಮಲ್ಲಿಕಾರ್ಜುನ ಎಸ್., ಬಸಯ್ಯ ಗುತ್ತೇದಾರ್, ಸೈಯದ್ ಜಾಫರ್ ಇತರರಿದ್ದರು. ಎರಡು ಜೋಡಿಗಳ ಉಚಿತ ವಿವಾಹ ಸಮಿತಿಯಿಂದ ನೆರವೇರಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.