ಚಿಕ್ಕೋಡಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮಕ್ಕೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಚಾಲನೆ ನೀಡಿದರು. ಶಾಸಕಿ ಶಶಿಕಲಾ ಜೊಲ್ಲೆ, ಜಗದೀಶ ಕವಟಗಿಮಠ, ಚಂದ್ರಶೇಖರ ಕವಟಗಿ,ಡಾ. ರಾಜೇಶ ನೇರ್ಲಿ ಇದ್ದರು. 
ಜಿಲ್ಲೆ

ಸ್ವಾತಂತ್ರ್ಯ ಹೋರಾಟಗಾರರ ಸ್ಮರಿಸೋಣ

ಚಿಕ್ಕೋಡಿ: ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಮಹನೀಯರನ್ನು ಸ್ಮರಿಸುವುದು ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಉದ್ದೇಶ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನನ್ನ ಮಣ್ಣು ನನ್ನ ದೇಶ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಮೇಲೆ ಸಾಕಷ್ಟು ಆಕ್ರಮಣಗಳಾದರೂ ನಮ್ಮ ಸಂಸತಿ, ಪರಂಪರೆ ಬದಲಾಗಿಲ್ಲ. ದೇಶದ ಮಣ್ಣಿಗಾಗಿ ಅನೇಕ ಹೋರಾಟಗಾರರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅವರ ಸ್ಮರಣೆಗೋಸ್ಕರ ಮಣ್ಣು ಶೇಖರಿಸಿ ದೇಶದ ವೀರಯೋಧರ ಅಮೃತ ವಾಟಿಕಾ ವನದಲ್ಲಿ ಸೇರಿಸುವ ಸಂಕಲ್ಪದ ಪುಣ್ಯ ದಿನವಿದು ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ದೇಶದ ಬಗ್ಗೆ ಯುವ ಜನಾಂಗಕ್ಕೆ ಅಭಿಮಾನ ಹೆಚ್ಚಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದೆ. ದೇಶದ ರಣೆಗೆ ಜೀವನ ಮುಡಿಪಾಗಿಡುತ್ತಿರುವ ಯೋಧರ ಆದರ್ಶ ಅಳವಡಿಸಿಕೊಳ್ಳಬೇಕು. ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಪ್ರಶ್ನೆ ಮಾಡಿಕೊಳ್ಳಬೇಕು. ದೇಶದಲ್ಲಿ ಸುರತೆಯಿಂದ ವಾಸಿಸುತ್ತೇವೆ ಎಂದರೆ ಅದು ಯೋಧರ ತ್ಯಾಗ ಮತ್ತು ಬಲಿದಾನದಿಂದ ಎಂದು ಅರಿಯಬೇಕು ಎಂದರು.

ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯ ಡಾ.ರಾಜೇಶ ನೇರ್ಲಿ, ಮಂಡಲದ ಅಧ್ಯ ಸಂಜಯ ಪಾಟೀಲ, ಪುರಸಭೆ ಹಿರಿಯ ಸದಸ್ಯ ಜಗದೀಶ ಕವಟಗಿಮಠ, ರಮೇಶ ಕಾಳನ್ನವರ, ಅಭಿಯಾನದ ಜಿಲ್ಲಾ ಸಂಚಾಲಕ ಶಿವಾನಂದ ನವಿನಾಳೆ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಭಾರ ಚಂದ್ರಶೇಖರ ಕವಟಗಿ, ಪ್ರಕಾಶ ಅಕ್ಕಲಕೋಟ, ಶಿವಾನಂದ ನವನಾಳೆ, ಸತೀಶ ಅಪ್ಪಾಜಿಗೋಳ, ರಮೇಶ ಖೇತಗೌಡರ ಇತರರಿದ್ದರು.