ಜಿಲ್ಲೆ

ಸ್ವಾತಂತ್ರ್ಯ ಹೋರಾಟಗಾರರ ತತ್ವಾದರ್ಶಗಳು ದಾರಿದೀಪ ; ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್

Ramanagara

ರಾಮನಗರ: ಮಹಾತ್ಮ ಗಾಂಧಿ ಅವರು ಪಾಲಿಸಿದ ಸತ್ಯ, ಅಹಿಂಸೆ ಹಾಗೂ ಸತ್ಯಾಗ್ರಹ ತತ್ವಗಳನ್ನು ಇಂದಿಗೂ ಭಾರತ ದೇಶ ಮಾತ್ರವ್ಲ ವಿಶ್ವದಾದ್ಯಂತ ಗೌರವಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹುತಾತ್ಮರ ದಿನಾಚರಣೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣತೆತ್ತ ಹುತಾತ್ಮರಿಗೆ 2 ನಿಮಿಷಗಳ ಕಾಲ ಮೌನಾಚರಣೆ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು.

ಗಾಂಧೀಜಿ ಕಾಲ್ನೃಡಿಗೆಯಲ್ಲಿ ದಂಡಿ ಯಾತ್ರೆ ನಡೆಸಿ ಬ್ರಿಟಿಷರಿಗೆ ಭಾರತದ ಶಕ್ತಿಯನ್ನು ತೋರಿಸಿದರು. ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಸೇರಿ ಹಲವಾರು ಹೋರಾಟಗಾರರು ವೈಯಕ್ತಿಕ ಜೀವನವನ್ನು ಬದಿಗಿಟ್ಟು ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ಅವರ ತತ್ವ ಮತ್ತು ಆದರ್ಶಗಳು ನಮಗೆ ದಾರಿದೀಪ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಜಾತಿ, ಮತ, ಲಿಂಗ, ಶ್ರೆಮಂತ-ಬಡವ ಎಂಬ ಭೇದ ಭಾವವಿರಲಿಲ್ಲ. ಸುಭಾಷ್ ಚಂದ್ರಬೋಸ್ ಅವರು ವಿಶ್ವವನ್ನು ಸುತ್ತಾಡಿ ಹಲವಾರು ನಾಯಕರ ಸಹಕಾರ ಪಡೆದು ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ತಪ್ಪಿಸಲು ಹೋರಾಡುತ್ತಾ ಪ್ರಾಣತ್ಯಾಗ ಮಾಡಿದರು ಎಂದರು.ಮಹಾತ್ಮ ಗಾಂಧಿ ಅವರ ಸಂದೇಶದಂತೆ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡೋಣ. ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನ ನೀಡಿದ ಮಹಾನ್ ವ್ಯಕ್ತಿಗಳ ತ್ಯಾಗವನ್ನು ನೆನಪಿಸಿಕೊಂಡು ನಾವು ಸಮಾಜಕ್ಕೆ ಯಾವ ರೀತಿ ಉತ್ತಮ ಕೊಡುಗೆ ನೀಡಬೇಕು ಎಂದು ಚಿಂತಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ ನಾವು ಇಂದು ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಬದುಕುತ್ತಿದ್ದೇವೆ. ಡಾ.ಬಿ.ಆರ್ ಅಂಬೇಡ್ಕರ್ ರಚಿಸಿಕೊಟ್ಟ ಸಂವಿಧಾನದ ಅಡಿಯಲ್ಲಿ ಸ್ವತಂತ್ರ, ಸಮಾನತೆಯ ಅಡಿಗಲ್ಲಿನ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದರು.

ಮಹಾತ್ಮ ಗಾಂಧಿ ಅವರು ಈ ದೇಶ ಕಂಡ ಶ್ರೇಷ್ಠ ದಾರ್ಶನಿಕ, ಹೋರಾಟಗಾರ. ನನ್ನ ಜೀವನವೇ ನನ್ನ ಸಂದೇಶ ಎಂಬ ಅವರ ಸಂದೇಶದಂತೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ನವೀನ್ ಹಳೆಮನೆ ಮಾತನಾಡಿ, ಗಾಂಧಿ ಎನ್ನುವುದು ಒಂದು ವ್ಯಕ್ತಿ ಅ್ಲ, ಆಲೋಚನಾ ಕ್ರಮ. ಗಾಂಧೀಜಿ ಸತ್ಯದ ಮಾರ್ಗದಲ್ಲಿ ನಡೆದವರು, ಅಹಿಂಸಾವಾದಿ ಎಂದು ತಿಳಿಸಿದರು.

ಜಿಪಂ ಸಿಇಒ ಇಕ್ರಂ, ಉಪ ಕಾರ್ಯದರ್ಶಿ ಟಿ.ಕೆ ರಮೇಶ್, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿ ಇದ್ದರು.