ಚನ್ನಪಟ್ಟಣ: ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಕಾಂಗ್ರೆಸ್ಸೇ ಬೇರೆ...ಈಗಿರುವ ಕಾಂಗ್ರೆಸ್ಸೇ ಬೇರೆ. ಹಳೇ ಕಾಂಗ್ರೆಸ್ ಯಾವಾಗಲೋ ಹೊರಟುಹೋಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ತಗಚಗೆರೆ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧೀಜಿಯವರೇ ಕಾಂಗ್ರೆಸ್ ಅನ್ನು ವಿಸರ್ಜನೆ ಮಾಡಬೇಕು, ಮುಂದುವರಿಸಬಾರದು ಎಂದಿದ್ದರು. ನಾನೂ ಸಹ 1959ರಲ್ಲಿ ಹುಟ್ಟಿದ್ದೇನೆ, ಸ್ವಾತಂತ್ರ್ಯಕ್ಕೆ ನನ್ನ ಕೊಡುಗೆ ಏನು ಇಲ್ಲ. ಆದರೆ, ಕೆಲವರು ದೇಶದ ಸ್ವಾತಂತ್ರ್ಯ ಹಾಗೂ ಇತಿಹಾಸದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಕಾಂಗ್ರೆಸ್ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಈಗ ಇತಿಹಾಸ ಹೇಳುವವರು ಯಾರು ಹುಟ್ಟಿದ್ದರು ಎಂದು ಟೀಕಿಸಿದರು.
ಬಡವರ ಸಮಸ್ಯೆಗಳು ಬಗೆಹರಿಯಲಿ ಎಂದು ಅಂದೇ ಪುಣ್ಯಾತ್ಮರು ಪ್ರಜಾಪ್ರಭುತ್ವ ವ್ಯವಸ್ಥೆ ತಂದರು. ಅಂದು ಲಕ್ಷಾಂತರ ಮಂದಿಯ ತ್ಯಾಗ ಬಲಿದಾನವಾಯಿತು. ಈಗ ಧರ್ಮದ ಹೆಸರಿನಲ್ಲಿ ಅದು ಮತ್ತೆ ಬೇಕಾ ಎಂದು ಎಚ್‌ಡಿಕೆ ಪ್ರಶ್ನಿಸಿದರು. ಗ್ರಾಮ ವಾಸ್ತವ್ಯದಲ್ಲಿ ಜನತೆ ಸಮಸ್ಯೆಗಳ ಅರ್ಜಿ ಹಿಡಿದು ನಿಂತಿದ್ದಾರೆಯೇ ವಿನಃ ನಮಗೆ ಹಿಜಾಬ್ ಹಾಗೂ ಕೇಸರಿ ಶಾಲು ಬೇಕು ಎಂದು ಕೇಳುತ್ತಿಲ್ಲ. ಇನ್ನಾದರೂ ಅನಗತ್ಯ ವಿಚಾರಕ್ಕೆ ಪ್ರಾಧಾನ್ಯತೆ ನೀಡದೆ ಜನರ ಕಲ್ಯಾಣದ ಬಗ್ಗೆ ಚಿಂತಿಸಲಿ ಎಂದರು.
ಯಾವುದೇ ಧರ್ಮಕ್ಕೆ ಅಪಚಾರ ಮಾಡಲ್ಲ: ಮಂಡ್ಯದಲ್ಲಿ ಹಿಜಾಬ್ ಬಗ್ಗೆ ಮಾಧ್ಯಮದವರು ಕೇಳಿದಾಗ, ಹಿಜಾಬ್ ಗಿಜಾಬ್ ಬಗ್ಗೆ ಸಂಬಂಧ ಇಲ್ಲ, ಮಕ್ಕಳ ಭವಿಷ್ಯ ಮುಖ್ಯ. ಅದಕ್ಕಾಗಿ ಎಲ್ಲವೂ ನಿಲ್ಲಬೇಕು ಎಂದಿದ್ದೆ. ವಾತನಾಡುವಾಗ ಮದುವೆ ಗಿದುವೆ ಅಂತೀವಿ, ಅದೇ ರೀತಿ ಹಿಜಾಬ್ ಗಿಜಾಬ್ ಅಂದಿದ್ದೇನೆ. ಅದನ್ನೆ ಹಿಜಾಬ್ ಬಗ್ಗೆ ಕುಮಾರಸ್ವಾಮಿ ಅಗೌರವವಾಗಿ ಮಾತನಾಡಿದರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಯಾವುದೇ ಸಮಾಜಕ್ಕೆ, ಧರ್ಮಕ್ಕೆ ಅಪಚಾರ ಮಾಡಲ್ಲ. ಎಲ್ಲರನ್ನೂ ಗೌರವಿಸುವವನು ಎಂದು ಎಚ್‌ಡಿಕೆ ತಿಳಿಸಿದರು.
ಬೀದಿಯಲ್ಲಿ ಹೋರಾಟ ನಡೆಸಲಿ: ಕಾಂಗ್ರೆಸ್‌ನವರು ರಾಷ್ಟ್ರಧ್ವಜದ ವಿಚಾರವಾಗಿ ಸದನದಲ್ಲಿ ನಡೆಸುತ್ತಿರುವ ಹೋರಾಟವನ್ನು ಬೀದಿಯಲ್ಲಿ ನಡೆಸಲಿ. ಸದನ ಇರುವುದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು. ಆದರೆ, ಕಾಂಗ್ರೆಸ್‌ನವರು ಜನರ ತೆರಿಗೆ ಹಣದಿಂದ ನಡೆಯುತ್ತಿರುವ ಸದನದ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಎಚ್‌ಡಿಕೆ ಆರೋಪಿಸಿದರು.ಕಾಡಾನೆ ದಾಳಿ ಸೇರಿ ರೈತರ ಹಲವು ಸಮಸ್ಯೆಗಳಿವೆ ಈ ಬಗ್ಗೆ ಎಲ್ಲಿ ಚರ್ಚೆ ಮಾಡಬೇಕು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಈ ವಿವಾದ ಬಿಟ್ಟು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಎಂಬುದು ನನ್ನ ಒತ್ತಾಯ. ಆದರೆ, ಕಾಂಗ್ರೆಸ್‌ನವರು ರಾಷ್ಟ್ರಧ್ವಜ ಅಂತಾ ಹೊರಟಿದ್ದಾರೆ, ರಾಷ್ಟ್ರಧ್ವಜದ ಬಗ್ಗೆ ಅವರೊಬ್ಬರೇ ಅಲ್ಲ, ಎಲ್ಲರಿಗೂ ಗೌರವವಿದೆ. ಈ ಕಾರಣಕ್ಕಾಗಿ ಸದನ ನಡೆಸಿ, ಇಲ್ಲವೇ ಅಮಾನತು ಮಾಡಿ, ಅದು ಸಾಧ್ಯವಾಗದಿದ್ದರೆ ಮುಂದೂಡಿ ಎಂದು ಒತ್ತಾಯಿಸಿದ್ದೇನೆ. ಪ್ರತಿನಿತ್ಯ ಒಂದೂವರೆ ಕೋಟಿ ರೂಪಾಯಿ ವ್ಯರ್ಥವಾಗುತ್ತಿದೆ. ಇದು ದೇಶ ಕಟ್ಟುವ ಪರಿಯೇ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು.
ಪಾದಯಾತ್ರೆಯಿಂದ ಮೇಕೆದಾಟು ಸಾಧ್ಯವಿಲ್ಲ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ನ ಪಾದಯಾತ್ರೆ ಆರಂಭಕ್ಕೆ ವ್ಯಂಗ್ಯವಾಡಿದ ಕುಮಾರಸ್ವಾಮಿ, ಕಾಂಗ್ರೆಸ್‌ನವರು ಪಾದಯಾತ್ರೆ ಮೂಲಕ ಅಧಿಕಾರ ಹಿಡಿಯುತ್ತೇವೆ ಎಂದು ಹೊರಟಿದ್ದಾರೆ. ಪಾದಯಾತ್ರೆ ಮಾಡಿದ ಕೂಡಲೇ ಯೋಜನೆ ಆಗುವುದಿಲ್ಲ. ಯೋಜನೆಗಾಗಿ ಕಾನೂನು ಸಮರ ಗೆಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಎತ್ತಿನಹೊಳೆ, ಭದ್ರಾ ಮೇಲ್ದಂಡೆ ಪರಿಸ್ಥಿತಿ ಏನಾಗಿದೆ ಎಂಬುದನ್ನು ಅವಲೋಕನ ಮಾಡಬೇಕು. ನಮ್ಮ ರಾಜ್ಯದ ನೀರನ್ನು ಕುಡಿಯಲು ಹಾಗೂ ಹೊಲಕ್ಕೆ ಹರಿಸಲು ಸುವಾರು 2 ರಿಂದ 5 ಲಕ್ಷ ಕೋಟಿ ಹಣ ಬೇಕು. ಬಜೆಟ್‌ನಲ್ಲಿ ವರ್ಷಕ್ಕೆ 8 ಸಾವಿರ ಕೋಟಿ ಹಣ ಇಡುತ್ತಾರೆ. ಅದರಲ್ಲಿ ಅರ್ಧ ಗುತ್ತಿಗೆದಾರರಿಗೆ ಇನ್ನರ್ಧ ಇವರ ಜೇಬಿಗೆ ಹೋಗುತ್ತದೆ. ಪರಿಸ್ಥಿತಿ ಹೀಗಿರುವಾಗ ಹೋರಾಟದಿಂದ ಮೇಕೆದಾಟು ಯೋಜನೆ ತರುವುದಾದರೆ ನಾನು ನಿಮ್ಮ ಜತೆ ಬರುತ್ತೇನೆ ಎಂದರು.
ಯಾರು ಏನೂ ಮಾಡಲು ಸಾಧ್ಯವಿಲ್ಲ: ಕಾಂಗ್ರೆಸ್‌ನವರು ಪಾದಯಾತ್ರೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಿಂದ ನನ್ನನ್ನು ಖಾಲಿ ಮಾಡಿಸಲು ಕಸರತ್ತು ನಡೆಸುತ್ತಿದ್ದಾರೆ. ಆದರೆ, ನನ್ನ ಕರ್ಮ ಭೂಮಿಯೊಳಗೆ ನನ್ನನ್ನು ಯಾರು ಏನೂ ಮಾಡಲು ಆಗಲ್ಲ. ಈ ಜನರ ಪ್ರೀತಿ ಇರುವವರೆಗೆ ಅಲುಗಾಡಿಸಲೂ ಸಾಧ್ಯವಿಲ್ಲ. ಬೇಕಾದರೆ ಅವರು ಇನ್ನೂ ಹತ್ತು ಪಾದಯಾತ್ರೆ ಮಾಡಲಿ ಎಂದು ಕುಟುಕಿದರು. ಜತೆಗೆ ಕಾಂಗ್ರೆಸ್‌ನ ಪಾದಯಾತ್ರೆ ಕೇವಲ ಬಿರಿಯಾನಿ, ಬಾಳೆಕಾಯಿ ಬಜ್ಜಿ, ಜ್ಯೂಸ್ ಯಾತ್ರೆ ಎಂದು ವ್ಯಂಗ್ಯವಾಡಿದರು.
2023ಕ್ಕೆ ಜೆಡಿಎಸ್ ಅಧಿಕಾರಕ್ಕೆ
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಕುವಾರಸ್ವಾಮಿ ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್‌ಗೆ ನಾಡಿನ ಜನತೆಯ ಆಶೀರ್ವಾದವಿದೆ. ಮುಂದಿನ ಬಾರಿ ನಾವೇ ಅಧಿಕಾರ ನಡೆಸುತ್ತೇವೆ. ಅತ್ಯಂತ ವಿಶ್ವಾಸದಲ್ಲಿ ಈ ವಾತನ್ನು ಹೇಳುತ್ತಿದ್ದೇನೆ ಎಂದು ಪುನರುಚ್ಚರಿಸಿದರು.
ಜೆಡಿಎಸ್ ನಿರ್ನಾಮ ಮಾಡುವ ಪ್ರಯತ್ನ ಲಿಸಲ್ಲ. ಪಕ್ಷದಲ್ಲಿ ಇರುವವರನ್ನು ಕರೆದುಕೊಂಡು ಹೋಗುವ ಕೆಲಸ ನಡೆಯುತ್ತಿದೆ. ಪ್ರತಿಯೊಂದು ವಾಹಿತಿ ನನಗಿದೆ. ಹಿಂದೆಯೂ 7 ಮಂದಿ ಜೆಡಿಎಸ್ ಬಿಟ್ಟು ಹೋದರು. ಪರಿಸ್ಥಿತಿ ಏನಾಗಿದೆ ಎಂದು ಎಲ್ಲರಿಗೂ ತಿಳಿದಿದೆ. ವಿರೋಧ ಪಕ್ಷದವರಿಗೆ ನನ್ನ ಪಕ್ಷದ ಕಾರ್ಯಕರ್ತರ ಶಕ್ತಿ ತಿಳಿದಿಲ್ಲ ಎಂದು ಎಚ್‌ಡಿಕೆ ಹೇಳಿದರು.
ಕನ್ನಡಪರ ಸಂಘಟನೆಗಳ ಜತೆ ಮುಂದಿನ ಚುನಾವಣೆ
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುವಾರಸ್ವಾಮಿ, ಮುಂದಿನ ಚುನಾವಣೆಗೋಸ್ಕರ ಕನ್ನಡಪರ ಸಂಟನೆಗಳು ಸೇರಿ ಸವಾನ ಮನಸ್ಕರ ಜತೆ ಚರ್ಚಿಸುತ್ತಿದ್ದೇನೆ. ಹೀಗಿರುವಾಗ ನಾನೇಕೆ ಬಿಜೆಪಿ ಜತೆ ಮೈತ್ರಿ ವಾಡಿಕೊಳ್ಳಲಿ. 123 ಸ್ಥಾನ ಗೆಲ್ಲುವ ದೃಷ್ಟಿಯಿಂದ ಸಂಟನೆ ನಡೆಸುತ್ತಿದ್ದೇನೆ. ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ಸನ್ನಿವೇಶ ಇಲ್ಲ. ಮೋದಿ, ದೇವೇಗೌಡರ ಜತೆಗೆ ಗೌರವದಿಂದ ನಡೆದುಕೊಂಡಿದ್ದಾರೆ. ಅದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇಲ್ಲ. 70-80 ಸ್ಥಾನದ ಮೇಲೆ ಅವರು ಗೆಲ್ಲಲ್ಲ. ಹೀಗಾಗಿ ಜೆಡಿಎಸ್ ಶಾಸಕರನ್ನು ಸೆಳೆಯಲು ಹೊರಟಿದ್ದಾರೆ. ನಿರಂತರವಾಗಿ ನಮ್ಮ ಶಾಸಕರ ಮನವೊಲಿಸುವ ಕೆಲಸ ವಾಡುತ್ತಿದ್ದಾರೆ. ಯಾರ‌್ಯಾರು ಹೋಗುತ್ತಾರೆ ಎಂಬ ವಾಹಿತಿಯೂ ಇದೆ. ಯಾರೇ ಹೋದರೂ ತಲೆಕೆಡಿಸಿಕೊಳ್ಳುವುದಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರಿಸುತ್ತದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಜೆಡಿಎಸ್ ಮುಖಂಡ ಬೋರ್‌ವೆಲ್ ರಾಮಚಂದ್ರು, ಭಾನುಪ್ರಸಾದ್, ತಗಚಗೆರೆ ಪವನ್‌ಕುವಾರ್, ಮಂಕುಂದ ನಂದೀಶ್ ಮತ್ತಿತರರು ಉಪಸ್ಥಿತರಿದ್ದರು.