ಜಿಲ್ಲೆ

ಸ್ವಾತಂತ್ರೊೃೀತ್ಸವ ಸಮಾರಂಭ

ಚಿತ್ರದುರ್ಗ: ಶ್ರೀ ಪಾರ್ಶ್ವನಾಥ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ 77ನೇ ಸ್ವಾತಂತ್ರೊೃೀತ್ಸವ ಸಮಾರಂಭವನ್ನು ಏರ್ಪಡಿಸಲಾಗಿ ತ್ತು. ಸಂಸ್ಥೆ ಅಧ್ಯಕ್ಷ ಶ್ರೀ ಬಾಬುಲಾಲ್‌ಜೀ ಪಟಿಯಾತ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು,ಶಾಲೆಯಲ್ಲಿ ಹೊಸದಾಗಿ ಸ್ಥಾಪಿಸಿರುವ ಕಂಪ್ಯೂಟರ್ ಹಾಗೂ ಆಡಳಿತ ಮಂಡಳಿ ಕೊಠಡಿಗಳನ್ನು ಉದ್ಘಾಟಿಸಿ,ಶ್ರೀ ಪಾರ್ಶ್ವನಾಥ ಭಗವಾನ್ ವಿಗ್ರಹಕ್ಕೆ ಪೂಜೆ ಸಲ್ಲಿಸಿದರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ,ಬಿಇಒ ಎಸ್.ನಾಗಭೂಷಣ್,ಸಂಸ್ಥೆ ಉ ಪಾಧ್ಯಕ್ಷ ಉತ್ತಮ್‌ಚಂದ್‌ಸುರಾನಾ, ಕಾರ‌್ಯದರ್ಶಿ ಸುರೇಶ್‌ಕುಮಾರ್‌ಸಿಸೋಡಿಯಾ ಮತ್ತಿತರರು ಇದ್ದರು.