ಹೊಸೂರ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಕಾರ್ಯಕ್ರಮವನ್ನು ಸಿಪಿಐ ಪಿ.ಎಸ್.ಸಾಲಿಮಠ ಉದ್ಘಾಟಿಸಿದರು. ಪಿಐ ಈರಯ್ಯ ಮಠಪತಿ, ಡಾ.ಎಂ.ವಿ.ಸಂಗೋಳ್ಳಿ, ಮಹಾಂತೇಶ ಮತ್ತಿಕೊಪ್ಪ ಇತರಿದ್ದರು. 
ಜಿಲ್ಲೆ

ಸ್ವಾತಂತ್ರೃ ಹೋರಾಟದ ಮುಂಚೂಣಿ ಗ್ರಾಮ ಹೊಸೂರ

ಬೈಲಹೊಂಗಲ: ಹೊಸೂರ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಂಚೂಣಿ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಮುರಗೋಡ ಠಾಣೆಯ ಸಿಪಿಐ ಈರಯ್ಯ ಮಠಪತಿ ಹೇಳಿದರು.

ಸಮೀಪದ ಹೊಸೂರ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಹಮ್ಮಿಕೊಂಡಿದ್ದ ಅಖಂಡ ಭಾರತ ಸಂಕಲ್ಪದಿನ ಹಾಗೂ ಗ್ರಾಮದ 215ಕ್ಕೂ ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬ್ರಿಟಿಷರ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡುವುದರೊಂದಿಗೆ ಯರವಾಡ ಜೈಲುವಾಸಿಯಾಗಿದ್ದ ಗ್ರಾಮದ ನೂರಾರು ಸ್ವಾತಂತ್ರ್ಯ ಹೊರಾಟಗಾರರ ಆದರ್ಶ ಜೀವನ ಮಂದಿನ ಪೀಳಿಗೆಗೆ ಪ್ರೇರಣೆಯಾಗಿವೆ ಎಂದರು.
ಬೈಲಹೊಂಗಲದ ಸಿಪಿಐ ಪಿ.ಎಸ್.ಸಾಲಿಮಠ ಮಾತನಾಡಿ, ಹಿರಿಯರ ತ್ಯಾಗ ಬಲಿದಾನದಿಂದ ಭಾರತ ಬ್ರಿಟಿಷರ ದಾಸ್ಯದಿಂದ ಮುಕ್ತವಾಗಿದೆ ಎಂದರು.

ನ್ಯಾಯವಾದಿ ಸಿದ್ದನಗೌಡರ ಮಾತನಾಡಿ, ಪ್ರತಿ ವರ್ಷ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲಾಗುತ್ತಿದೆ ಎಂದರು.
ವೈದ್ಯಾಧಿಕಾರಿ ಡಾ. ರವೀಂದ್ರ ಜಕನೂರ ಧ್ವಜಾರೋಹಣ ನೆರವೇರಿಸಿದರು. ಡಾ.ಎಂ.ವಿ.ಸಂಗೋಳ್ಳಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರನ್ನು ಸತ್ಕರಿಸಲಾಯಿತು.

ಪ್ರಕಾಶ ಬಾಳೇಕುಂದರಗಿ, ಮಹಾಂತೇಶ ಮತ್ತಿಕೊಪ್ಪ, ಸೋಮಲಿಂಗಪ್ಪ ಇಂಗಳಗಿ, ಬಸವರಾಜ ಬಾಳೇಕುಂದರಗಿ, ಎಸ್.ಕೆ.ಮೆಳ್ಳಿಕೇರಿ, ದುಂಡಯ್ಯ ಹಿರೇಮಠ, ಉಮೇಶ ಸಂಗೋಳ್ಳಿ, ಈರಣ್ಣ ಚಿಕ್ಕೊಪ್ಪ, ಸಂಜು ಚಿಕ್ಕೊಪ್ಪ, ಮಲ್ಲಿಕಾರ್ಜುನ ಕಂಬಾರ, ಮಲ್ಲಿಕಾರ್ಜುನ ಕರಡಿಗುದ್ದಿ, ಉಮೇಶ ಕಮತಗಿ, ಗೌಸ್ ಮುಲಾಗ್ಲ, ಬಸವರಾಜ ಬೂದಿಹಾಳ, ಪುಟ್ಟು ಕಲ್ಲೇದ, ಮಲ್ಲಿಕಾರ್ಜುನ ಚಿಕ್ಕೊಪ್ಪ, ಮಲ್ಲಿಕಾರ್ಜುನ ಕಮತಗಿ, ಸೋಮಪ್ಪ ವಕ್ಕುಂದ, ಪ್ರಕಾಶ ಹುರಕಡ್ಲಿ ಇತರರು ಇದ್ದರು.