ಜಿಲ್ಲೆ

ಸ್ವಾತಂತ್ರೃ ಹೋರಾಟಗಾರರ ಉದ್ಯಾನದಲ್ಲಿ ಸಸ್ಯಕಾಶಿ ಉದ್ಘಾಟನೆ

ಮೈಸೂರು: ನಗರದ ಸ್ವಾತಂತ್ರೃ ಹೋರಾಟಗಾರರ ಉದ್ಯಾನವನದಲ್ಲಿ ‘ಕೃಷ್ಣಾಶ್ವತ್ಥ’ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಆಯುರ್ವೇದ ಸಸ್ಯಕಾಶಿ ಹಾಗೂ 14ನೇ ಹಣಕಾಸು ಯೋಜನೆಯಡಿ 18 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಯೋಗ ಮಂಟಪವನ್ನು ಶಾಸಕ ಎಲ್. ನಾಗೇಂದ್ರ ಉದ್ಘಾಟಿಸಿದರು.

ನಂತರ ಮಾತನಾಡಿದ ಎಲ್.ನಾಗೇಂದ್ರ, ಕೃಷ್ಣಾಶ್ವತ್ಥ’ ಆಯುರ್ವೇದ ಸಸ್ಯಕಾಶಿ ಆಯುರ್ವೇದ ಸಸ್ಯಕಾಶಿ ನಿರ್ಮಾಣ ಮಾಡಬೇಕು ಎಂದು ಹಲವಾರು ವರ್ಷಗಳಿಂದ ಅಂದುಕೊಂಡಿದ್ದೆವು. ಇದೀಗ ಸಸ್ಯಕಾಶಿ ಉದ್ಘಾಟನೆಗೊಂಡಿರುವುದು ಸಂತಸದ ವಿಚಾರ. ಇದು ನಮ್ಮ ಕ್ಷೇತ್ರದ ಹೆಮ್ಮೆಯ ವಿಷಯವಾಗಿದೆ. ಸಸ್ಯಕಾಶಿ ನಿರ್ಮಾಣದ ಹಿಂದೆ ಜಿಲ್ಲಾ ಸ್ವಾಂತಂತ್ರೃ ಹೋರಾಟಗಾರರ ಸಂಘದ ಅಧ್ಯಕ್ಷ ವೈ.ಸಿ. ರೇವಣ್ಣ ಅವರ ಪರಿಶ್ರಮ ಅಪಾರವಾಗಿದೆ ಎಂದರು.

ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಯೋಗ ಹಾಗೂ ಆಯುರ್ವೇದದ ಅವಶ್ಯಕತೆ ಇದೆ. ಆಯುರ್ವೇದ ಮಹತ್ವವನ್ನು ಇತ್ತೀಚೆಗೆ ಎಲ್ಲರು ಅರಿತುಕೊಳ್ಳಲು ಪ್ರಾರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಯುರ್ವೇದಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದಾರೆ. ಆಯುರ್ವೇದದ ಬಳಕೆಯಿಂದ ನಮ್ಮ ಆರೋಗ್ಯ ವೃದ್ಧಿಯಾಗಲಿದೆ ಎಂದು ಹೇಳಿದರು.

ಸುಬ್ಬರಾಯನ ಕೆರೆಯಲ್ಲಿ ಹಲವಾರು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ಹೇಳಿದರು.

ಉಪ ಮೇಯರ್ ಡಾ.ಜಿ. ರೂಪಾ, ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಜಿಲ್ಲಾ ಸ್ವಾಂತಂತ್ರೃ ಹೋರಾಟಗಾರರ ಸಂಘದ ಅಧ್ಯಕ್ಷ ವೈ.ಸಿ. ರೇವಣ್ಣ, ಸಂಘದ ಖಜಾಂಚಿ ರಂಗಶೆಟ್ಟಿ, ಬಿಜೆಪಿ ನಗರ ಉಪಾಧ್ಯಕ್ಷ ಹರ್ಷ, ಸ್ಥಳೀಯ ಪ್ರಮುಖರಾದ ಶ್ರೀನಿವಾಸ್, ವ್ನಿೇಶ್ ಭಟ್, ಗೋಪಾಲಕೃಷ್ಣ, ಸುದರ್ಶನ್, ಸಚಿನ್, ಮಂಜುನಾಥ್, ಚರಣ್ ಹಾಗೂ ಇತರರು ಇದ್ದರು.