ಮಗೇಹಳ್ಳಿ ಉಡಸಲಮ್ಮ ದೇವರ ಜಾತ್ರ ಮಹೋತ್ಸವದ ಸಂದರ್ಭ ಗ್ರಾಮಸ್ಥರು ಮತ್ತು ದೇಗುಲ ಸಮಿತಿಯಿಮದ ಅಭಿನಂದನೆ ಸ್ವೀಕರಿಸುತ್ತಿರುವ ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್. 
ಜಿಲ್ಲೆ

ಸ್ವಾತಂತ್ರೃ ಉಳಿಯಬೇಕಾದರೆ ಬಿಜೆಪಿ ಗೆಲ್ಲಬೇಕು

ಬೇಲೂರು: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶಕ್ಕೆ ಇನ್ನೊಮ್ಮೆ ಸ್ವಾತಂತ್ರ್ಯ ಬಂದಿದೆ. ಇನ್ನು ಮುಂದೆಯೂ ಇದು ಹೀಗೆಯೇ ಉಳಿಯಬೇಕಾದರೆ ಮತ್ತೊಮ್ಮೆ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಅವಶ್ಯಕತೆಯಿದೆ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಕೆ. ಸುರೇಶ್ ಹೇಳಿದರು.

ತಾಲೂಕಿನ ಮಗೇಹಳ್ಳಿ ಉಡಸಲಮ್ಮ ದೇವರ ಜಾತ್ರಾ ಮಹೋತ್ಸವದ ಸಂದರ್ಭ ದೇವರಿಗೆ ಪೂಜೆ ಸಲ್ಲಿಸಿ, ಸಮಿತಿಯವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಹಬ್ಬಗಳು-ಜಾತ್ರೆಗಳೆಲ್ಲ ವರ್ಷಕ್ಕೊಮ್ಮೆ ಊರಿನ ಎಲ್ಲರನ್ನೂ ಒಗ್ಗೂಡಿಸಿ ಸಂತೋಷವನ್ನು ಹೆಚ್ಚಿಸುತ್ತವೆ. ಇಂತಹ ಜಾತ್ರೆಗಳು ಮತ್ತು ಸಾರ್ವಜನಿಕ ಹಬ್ಬಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಸಭೆಗಳನ್ನು ಮಾಡುವುದಕ್ಕೆ ಮಾಡುತ್ತಿದ್ದರು ಎಂದು ಸ್ಮರಿಸಿದರು. ಮಗೇಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಪ್ರಮುಖರಿದ್ದರು.