ಜಿಲ್ಲೆ

ಸ್ವಸ್ಥ ಸಮಾಜ ನಿರ್ಮಾಣ ರೋಟರಿ ಗುರಿ

ಸೋಮಲಿಂಗ ತಳವಾರ

ಬೈಲಹೊಂಗಲ: ಪಲ್ಸ್​ ಪೊಲೀಯೋ ನಿಮೂರ್ಲನೆ, ಸ್ವಚ್ಛ ಸಮಾಜ ನಿರ್ಮಾಣ ಹಾಗೂ ಶಿಣಕ್ಕೆ ಆದ್ಯತೆ ನೀಡುವುದು ರೋಟರಿ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದು ರೋಟರಿ ಜಿಲ್ಲಾ ಗರ್ವನರ್​ ಶರದ ಪೈ ಹೇಳಿದರು.

ಪಟ್ಟಣದ ಹೊಸೂರ ರಸ್ತೆಯ ರೋಟರಿ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರೋಟರಿ ಕ್ಲಬ್​, ಇನ್ನರ್​ವ್ಹೀಲ್​ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಟ್ಟಣದ ರೋಟರಿ ಕ್ಲಬ್​ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಅಸಿಸ್ಟಂಟ್​ ಗವರ್ನರ್​ ಮಹೇಶ ಬೆಲ್ಲದ ಅವರ ಅಧಿಕಾರ ಅವಧಿಯಲ್ಲಿ 516ಕ್ಕೂ ಹೆಚ್ಚು ಬಡ ರೋಗಿಗಳ ಕಣ್ಣು ಪೊರೆ ಚಿಕಿತ್ಸೆ ಗಮನ ಸೆಳೆದಿತ್ತು. ಹಾಗಾಗಿ ಅವರಿಗೆ ಇದೀಗ ಬೈಲಹೊಂಗಲ, ಗೋಕಾಕ, ರಾಮದುರ್ಗ, ಬೆಳಗಾವಿ ತಾಲೂಕುಗಳ ಜವಾಬ್ದಾರಿ ವಹಿಸಿಕೊಡಲಾಗಿದೆ ಎಂದರು.

ನೂತನ ಅಧ್ಯರಾಗಿ ಹಿರಿಯ ನೋಟರಿ ಸದಸ್ಯ ಮಹಾಂತೇಶ ಜಿಗಜಿನ್ನಿ, ಕಾರ್ಯದರ್ಶಿಯಾಗಿ ಅನಿಲ ಚಡಿಚಾಳ, ಸಹ ಕಾರ್ಯದರ್ಶಿಯಾಗಿ ಆನಂದ ವಾಲಿ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಇನ್ನರ್​ವ್ಹೀಲ್​ ನೂತನ ಅಧ್ಯೆಯಾಗಿ ಸುಮಂಗಲಾ ಜಿಗಜಿನ್ನಿ, ಕಾರ್ಯದರ್ಶಿಯಾಗಿ ಪವಿತ್ರಾ ಶೆಟ್ಟಿ ಅಧಿಕಾರ ಸ್ವೀಕರಿಸಿದರು.

ಅಸಿಸ್ಟಂಟ್​ ಗವರ್ನರ್​ ಸಚಿನ ಬಿಚ್ಚು, ಇನ್ನರ್​ವ್ಹೀಲ್​ ಜಿಲ್ಲಾ ಕಾರ್ಯದರ್ಶಿ ವಿರಾಜ ಕೋಟಕ, ಡಾ.ಮಹಾಂತೇಶ ಪುರಾಣಿಕಮಠ, ನಿಕಟಪೂರ್ವ ಅಧ್ಯೆ ದೀಪಾ ಹಲಸಗಿ, ನಿಕಟಪೂರ್ವ ಕಾರ್ಯದರ್ಶಿ ವಿಜಯಾ ಕಳ್ಳಿಬಡ್ಡಿ, ಶಿವಶಂಕರ ತಟವಾಟಿ, ಸಂಜಯ ಮಹಾಲೆ, ಡಾ.ಮಹಾಂತೇಶ ಗದಗ, ಪ್ರಮೋದಕುಮಾರ ವಕ್ಕುಂದಮಠ, ಡಾ.ಸಾಗರ ಕುಲಕರ್ಣಿ, ಡಾ.ಸಿ.ಬಿ.ಗಣಾಚಾರಿ, ಡಾ.ನಾಗರಾಜ ಹಲಸಗಿ, ಗೌತಮ ಇಂಚಲ, ಪ್ರುಲ್​ ಪಾಟೀಲ, ನಾಗೇಶ ಮರಕುಂಬಿ, ಅರ್ಜುನ ಕಲಕುಟಕರ, ಡಾ.ಅಯ್ಯನಗೌಡ ಪಾಟೀಲ, ಸುಧಾಕರ ಶೆಟ್ಟಿ ಇತರರಿದ್ದರು. ಡಾ.ಬಸವರಾಜ ಮಹಾಂತಶೆಟ್ಟಿ ಸ್ವಾಗತಿಸಿದರು. ಸುರೇಶ ಉಡುಪಿ ಮತ್ತು ಸವಿತಾ ಉಡುಪಿ ನಿರೂಪಿಸಿದರು. ಸುಜಾತಾ ಮಹಾಲೆ ವಂದಿಸಿದರು.