ಶಿವನಿ ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ಸ್ವಸಹಾಯ ಸಂಘಗಳಿಗೆ ಆಯೋಜಿಸಿದ್ದ ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಗಳ ಮಾಹಿತಿ ಕಾರ್ಯಾಗಾರವನ್ನು ಗ್ರಾಪಂ ಅಧ್ಯಕ್ಷೆ ಸವಿತಾ ಉದ್ಘಾಟಿಸಿದರು. ರವಿಚಂದ್ರನ್, ಮಹೇಶ್, ರಾಘವೇಂದ್ರ, ಜಯಣ್ಣ, ಶ್ರೀನಿವಾಸ್ ಇತರರಿದ್ದರು. 
ಜಿಲ್ಲೆ

ಸ್ವಸಹಾಯ ಸಂಘಗಳಿಗೆ ಆರ್ಥಿಕ ನೆರವು

ತರೀಕೆರೆ: ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಪ್ರಗತಿ ಸಾಧಿಸಿ ಸ್ವಾವಲಂಬಿ ಬದುಕು ನಡೆಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಸವಿತಾ ಹೇಳಿದರು.

ಶಿವನಿ ಗ್ರಾಮದಲ್ಲಿ ಯೂನಿಯನ್ ಬ್ಯಾಂಕ್ ಸಹಯೋಗದಲ್ಲಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಆಯೋಜಿಸಿದ್ದ ಪ್ರಧಾನ ಮಂತ್ರಿ ಜನ ಸುರಕ್ಷಾ ಯೋಜನೆಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಬ್ಯಾಂಕ್‌ಗಳಲ್ಲಿ ಸ್ವಸಹಾಯ ಸಂಘಗಳಿಗೆ ವಿವಿಧ ಯೋಜನೆಗಳ ಮೂಲಕ ಸಾಲ ಸೌಲಭ್ಯ ಒದಗಿಸುತ್ತಿದ್ದು, ಸಂಘಗಳ ಸದಸ್ಯರು ಸಾಲ ಪಡೆದು ಸಕಾಲದಲ್ಲಿ ಮರು ಪಾವತಿ ಮಾಡಬೇಕು ಎಂದರು.

ಯೂನಿಯನ್ ಬ್ಯಾಂಕ್ ಉಪ ಪ್ರಾದೇಶಿಕ ಮುಖ್ಯಸ್ಥ ರವಿಚಂದ್ರನ್ ಮಾತನಾಡಿ, ಸ್ವಸಹಾಯ ಸಂಘಗಳು ಪ್ರಮುಖ ಐದು ಧ್ಯೇಯಗಳನ್ನಿಟ್ಟು ಕಾರ್ಯನಿರ್ವಹಿಸಬೇಕು. ಸಕಾಲದಲ್ಲಿ ಸಭೆ ಆಯೋಜನೆ, ನಿರಂತರ ಉಳಿತಾಯ, ಸರಿಯಾಗಿ ಸಾಲ ಮರುಪಾವತಿ ಮಾಡಬೇಕು. ಆಸಕ್ತಿ ಇದ್ದವರಿಗೆ ಬ್ಯಾಂಕ್‌ನಿಂದ ಗುಡಿ ಕೈಗಾರಿಕೆ, ಟೈಲರಿಂಗ್ ಇತರ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಶಿವನಿ ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್, ಬುಕ್ಕಾಂಬುದಿ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ಸಮಾಜಸೇವಕ ಜಯಣ್ಣ, ಹಂಗರ್ ಪ್ರಾಜೆಕ್ಟ್ ಸಂಯೋಜಕ ಶ್ರೀನಿವಾಸ್, ಪಿಡಿಒ ಹರ್ಷವರ್ಧನ್, ಕೃಷಿ ಅಧಿಕಾರಿ ಶಿವಪ್ರಸಾದ್, ಬ್ಯಾಂಕ್ ಪ್ರತಿನಿಧಿ ಪುಣ್ಯವತಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.