ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ 30ನೇ ಚಾತುರ್ವಸ್ಯ ಕಾರ್ಯಕ್ರಮವು ಸೀಮೋಲ್ಲಂಘನದೊಂದಿಗೆ ಬುಧವಾರ ಸಂಪನ್ನಗೊಂಡಿತು. ಸಂಧ್ಯಾ ಕಾಲದಲ್ಲಿ ಶಾಲ್ಮಲಾ ನದಿ ತೀರದಲ್ಲಿ ಗಂಗಾಪೂಜೆ ನೆರವೇರಿಸಿ ಚಾತುರ್ವಸ್ಯ ಸೀಮೋಲ್ಲಂಘನಗೈದರು. ನಂತರ ಸೋಂದಾ ಸದಾಶಿವ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಈ ವೇಳೆ ಆಗಮಿಸಿದ ಶಿಷ್ಯ-ಭಕ್ತರನ್ನು ಆಶೀರ್ವದಿಸಿ ಮಂತ್ರಾಕ್ಷತೆ ನೀಡಿದರು. ಮಠದ ಸಿಬ್ಬಂದಿ ವರ್ಗದವರಿಂದ ಚಾತುರ್ವಸ್ಯದ ಅಂಗವಾಗಿ ಪಾದುಕಾಪೂಜೆ, ಭಿಕ್ಷಾವಂದನೆ ನೆರವೇರಿತು.