ಶೃಂಗೇರಿ: ತಾಲೂಕಿನಲ್ಲಿ ಸ್ವರ್ಣಗೌರಿ ವ್ರತನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು.
ದೇವರ ಮನೆಯಲ್ಲಿ ಸ್ವರ್ಣಗೌರಿಯನ್ನು ಪ್ರತಿಷ್ಠಾಪಿಸಿ, ವಿವಿಧ ಬಗೆಯ ಹೂಗಳು, ಗೆಜ್ಜೆ ವಸ್ತ್ರ, ಶ್ರೀಗಂಧ ಇತ್ಯಾದಿಗಳಿಂದ ದೇವಿಯನ್ನು ಅಲಂಕರಿಸಿ ಫಲ, ಪುಷ್ಪ್ಪಗಳನ್ನು ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಮಹಿಳೆಯರಿಗೆ ಬಾಗಿನ ನೀಡಿದರು. ಶೃಂಗೇರಿ ಶಾರದಾಪೀಠದಲ್ಲಿ ಸುಮಂಗಲಿಯರು ಸ್ವರ್ಣಗೌರಿಯನ್ನು ಪೂಜಿಸಿ ವ್ರತ ಕೈಗೊಂಡರು. ಆ.27ರಂದು ಗಣಪತಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಹೂ, ಹಣ್ಣುಗಳ ವ್ಯಾಪಾರ ಜೋರಾಗಿತ್ತು.