ಜಿಲ್ಲೆ

ಸ್ವರ್ಣ ಲೇಪಿತ ಆಭರಣ ಸಮರ್ಪಣೆ

ಚಾಮರಾಜನಗರ: ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿರುವ ಶ್ರೀಚಾಮುಂಡೇಶ್ವರಿ ದೇವಿಗೆ ಸೋಮವಾರ ಸ್ವರ್ಣ ಲೇಪಿತ ಆಭರಣವನ್ನು ಸಮರ್ಪಣೆ ಮಾಡಲಾಯಿತು. ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದ ಹುಲ್ಲಹಳ್ಳಿಯ ಎಚ್.ವಿ.ವಿಶ್ವೇಶ್ವರ ಪಂಡಿತ ಅವರ ಪುತ್ರ ಶ್ರೀಕಂಠಸ್ವಾಮಿ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ಬಳಿಕ ದೇವರಿಗೆ ವಜ್ರಾಂಗಿ ಆಭರಣವನ್ನು ಧರಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಕಂಠಸ್ವಾಮಿ, ತಹಸೀಲ್ದಾರ್ ಗಿರಿಜಾ, ದೇವಸ್ಥಾನದ ಆಗಮಿಕ ಡಾ.ನಾಗರಾಜ್ ದೀಕ್ಷಿತ್, ಆಗಮಿಕ ದರ್ಶನ್, ಗಣೇಶ್ ದಿಕ್ಷೀತ್, ಪ್ರದೀಪ್ ಕುಮಾರ್ ದಿಕ್ಷೀತ್ ಹಾಗೂ ಇತರರು ಹಾಜರಿದ್ದರು.