ಸೇಡಂ: ಇಂದಿನ ದುಬಾರಿ ಜೀವನದಲ್ಲಿ ಕುಟುಂಬ ನಿರ್ವಹಣೆಗೆ ಕೈಜೋಡಿಸುವ ನಿಟ್ಟಿನಲ್ಲಿ ಮಹಿಳೆಯರೂ ಉದ್ಯೋಗಿಗಳಾಗುವ ಅಗತ್ಯವಿದೆ ಎಂದು ಭಾರತಿ ಹೊಲಿಗೆ ಕೇಂದ್ರದ ಪ್ರಾಚಾರ್ಯೆ ಲಕ್ಷ್ಮೀ ಸಿಂಪಿ ಹೇಳಿದರು.
ಆಡಕಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶುಕ್ರವಾರ ಹಮ್ಮಿಕೊಂಡಿದ್ದ ಲಕ್ಷಿö್ಮÃಪೂಜೆ ಮತ್ತು ಸ್ವಯಂ ಉದ್ಯೋಗ ಪ್ರೇರಣಾ ಶಿಬಿರದಲ್ಲಿ ಮಾತನಾಡಿ, ಮಹಿಳಾ ಸಬಲೀಕರಣದಿಂದ ದೇಶದ ಅಭಿವೃದ್ಧಿ ಸಾಧ್ಯ. ಹೀಗಾಗಿ ಮಹಿಳೆಯರು ಹಲವು ತರಬೇತಿಗಳ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.
ಧರ್ಮಸ್ಥಳ ಸಂಸ್ಥೆ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣಾ ಮಾತನಾಡಿ, ಸಂಸ್ಥೆ ಕೇವಲ ಮಹಿಳಾ ಸಂಘಗಳನ್ನು ರಚಿಸಲು ಸೀಮಿತವಾಗಿಲ್ಲ. ಬದಲಿಗೆ ಸಂಘದ ಸದಸ್ಯರ ಕುಟುಂಬದ ಸರ್ವತೋಮುಖ ಅಭಿವೃದ್ಧಿ ಮತ್ತು ಸ್ವಾಸ್ಥö್ಯ ಸಮಾಜ ನಿರ್ಮಾಣದ ಕನಸನ್ನು ಹೊಂದಿದೆ ಎಂದು ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ, ಸಮನ್ವಯಾಧಿಕಾರಿ ಸುವರ್ಣಾ, ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಮನ್ನೆ, ಸ್ವಸಹಾಯಕ ಸಂಘಗಳ ಒಕ್ಕೂಟದ ಅಧ್ಯಕ್ಷೆ ಮಲ್ಲಮ್ಮ ಹೊಟ್ಟೆ, ಪತ್ರಕರ್ತರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಸ್ವಾಮಿ ಚಿಕ್ಕಮಠ ಇದ್ದರು. ಹೊನ್ನಪ್ಪಗೌಡ ಗೌರ ನಿರೂಪಣೆ ಮಾಡಿದರು. ರೂಪಾದೇವಿ ಹಿರೇಮಠ ಸ್ವಾಗತಿಸಿ ವಂದಿಸಿದರು.