ಕನ್ನಡ ವಿವಿಯಲ್ಲಿ ಶುಕ್ರವಾರ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ನಿವೃತ್ತ ಪ್ರಧ್ಯಾಪಕ ಡಾ.ಲಕ್ಷö್ಮಣ್ ತೆಲಗಾವಿ ಮಾತನಾಡಿದರು.  
ಜಿಲ್ಲೆ

ಸ್ವಮೌಲ್ಯಮಾಪನ, ಸ್ವವಿಮರ್ಶೆ ಅಗತ್ಯ

ಹೊಸಪೇಟೆ: ಕನ್ನಡ ವಿವಿಯ ಸಂಸ್ಥಾಪನಾ ದಿನಾಚರಣೆಯ ಈ ಸಂದರ್ಭದಲ್ಲಿ ಬೋಧಕರು ಮತ್ತು ಬೋಧಕೇತರರು ತಮ್ಮನ್ನು ತಾವು ಸ್ವಮೌಲ್ಯಮಾಪನ ಮತ್ತು ಸ್ವವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಲಕ್ಷ್ಮಣ್ ತೆಲಗಾವಿ ಹೇಳಿದರು.

ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಯ ಸಂಸ್ಥಾಪನಾ ದಿನಾಚರಣೆಯಲ್ಲಿ ಪ್ರೊ.ಲಕ್ಷö್ಮಣ್ ತೆಲಗಾವಿ ಮಾತನಾಡಿದರು.

ವಿವಿಯ ಸಂಸ್ಥಾಪಕ ಕುಲಪತಿಗಳಾಗಿದ್ದ ಡಾ.ಚಂದ್ರಶೇಖರ ಕಂಬಾರ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದರು. ನಂತರ ಬಂದ ಕುಲಪತಿಗಳಿಗೆ ಇಂತಹ ಸವಾಲುಗಳು ಎದುರಾಗಲಿಲ್ಲ. ಆಗ ನಡೆಯುತ್ತಿದ್ದ ಒಡ್ಡೋಲಗ ಸಭೆಯಲ್ಲಿ ವಿವಿಗೆ ವಿದ್ಯಾರಣ್ಯ ಅಂದರೆ ವಿದ್ಯೆಯ ಆರಣ್ಯ ಎಂಬರ್ಥದಲ್ಲಿ ಹೆಸರನ್ನು ಸೂಚಿಸಿದ್ದೇ ಕಂಬಾರರು. ವಿಜಯನಗರ ಸಾಮ್ರಾಜ್ಯವನ್ನು ಸದಾ ನೆನಪಿಸುವಂತೆ ಕ್ರಿಯಾಶಕ್ತಿ, ಭುವನವಿಜಯ ಎಂದು ಕಟ್ಟಡಗಳಿಗೆ ಹೆಸರಿಟ್ಟಿದ್ದರು. ನಂತರ ಬಂದ ಕುಲಪತಿಗಳಾದ ಡಾ.ಎಂ.ಎA.ಕಲಬುರ್ಗಿ, ಡಾ.ಎಚ್.ಜೆ.ಲಕ್ಕಪ್ಪಗೌಡ ಸೇರಿದಂತೆ ಈಗಿನ ಕುಲಪತಿಗಳ ವರೆಗೆ ಕನ್ನಡ ವಿವಿಯು ವಿವಿಧ ಆಯಾಮಗಳಲ್ಲಿ ಭೌತಿಕ ಮತ್ತು ಬೌದ್ಧಿಕ ಸ್ವರೂಪವನ್ನು ಪಡೆಯಿತು ಎಂದರು.

ಕುಲಸಚಿವ ಡಾ.ವಿಜಯ ಪೂಣಚ್ಚ ತಂಬAಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ವಿವಿ ಪವಿತ್ರವಾದ ಸ್ಥಳದಲ್ಲಿ ನೆಲೆಯಾಗಿದ್ದು ನಮಗೆಲ್ಲ ಸ್ಥಾನ, ಮಾನ, ಅನ್ನದ ಜತೆಗೆ ಘನತೆಯನ್ನು ಕೊಟ್ಟಿದೆ. ಕಂಬಾರರು ಕನ್ನಡ ವಿವಿ ಬಗ್ಗೆ ಕೆಲವು ಪುಟಗಳನ್ನು ಬರೆದರು. ಅವರು ಖಾಲಿ ಬಿಟ್ಟಿದ್ದ ಉಳಿದ ಪುಟಗಳನ್ನು ನಾವೆಲ್ಲರೂ ಸೇರಿ ತುಂಬಬೇಕಾಗಿದೆ. ನಮ್ಮಲ್ಲಿ ಬೌದ್ಧಿಕ ಮತ್ತು ಸೈದ್ಧಾಂತಿಕ ನೆಲೆಗಳಲ್ಲಿ ವ್ಯತ್ಯಾಸಗಳಿವೆ. ಆದರೆ ಕನ್ನಡ ವಿವಿಯ ಅಸ್ತಿತ್ವಕ್ಕೆ ಕಂಟಕ ಬಂದಾಗ ಎಲ್ಲವನ್ನು ಮರೆತು ಒಂದಾಗುತ್ತೇವೆ. ಇದೇ ಕನ್ನಡ ವಿವಿಯ ಬೌದ್ಧಿಕ ಪರಂಪರೆ. ಭೂಮಿಯ ಪ್ರಶ್ನೆ ಬಂದಾಗ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದರು.

ಉಪಕುಲಸಚಿವ ಡಾ.ಎ.ವೆಂಕಟೇಶ, ವಿವಿಯ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ವೀರೇಶ ಬಡಿಗೇರ, ಅಧ್ಯಾಪಕಿ ಕೆ.ಪದ್ಮಾವತಿ ಇದ್ದರು.