ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಜಾತ್ರೆ ಮೈದಾನದಲ್ಲಿ ಫೆ.೨೪ ರಿಂದ ೧೦ ದಿನ ನಡೆಯುವ ರಾಷ್ಟç ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿದ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ವಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಡಿ.ಸಿ.ಕಚೇರಿ ಸಭಾಂಗಣದಲ್ಲಿ ಸರಸ್ ಮೇಳ ಕುರಿತು ರಚಿಸಿರುವ ವಿವಿಧ ಸಮಿತಿಗಳ ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿ ಮಾತನಾಡಿ, ಕಸ ಸಂಗ್ರಹಣೆಗೆ ಪಾಲಿಕೆಯಿಂದ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಬೇಕು. ಬಯೋ ಟಾಯಲೆಟ್ ವ್ಯವಸ್ಥೆ ಮಾಡಬೇಕು ಎಂದರು.
ರಾಷ್ಟç ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವಾಗಿದ್ದು, ಮಾರಾಟಕ್ಕೆ ಜನ ಬರುತ್ತಾರೆ. ಪ್ರಚಾರ ಹೆಚ್ಚಿಸಬೇಕು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಿದ್ದು, ಜನಸಂದಣಿ ಹೆಚ್ಚುವ ಸಾಧ್ಯತೆ ಇದೆ. ಪಾರ್ಕಿಂಗ್ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಬೇಕು. ಜಾತ್ರೆ ಮೈದಾನ ಸುತ್ತ ಸೈನೇಜ್ ಬೋರ್ಡ್ ಅಳವಡಿಸಬೇಕು ಎಂದರು.
ಸಾAಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು. ಎರಡು ಶಿಫ್ಟ್ನಲ್ಲಿ ವೈದ್ಯರು ಕೆಲಸ ನಿರ್ವಹಿಸಬೇಕು. ಅಗ್ನಿ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿಯುವ ನೀರು ನಿರಂತರ ಪೂರೈಸಬೇಕು. ವಿವಿಧ ರಾಜ್ಯದಿಂದ ಬರುವ ಸ್ವಸಹಾಯ ಗುಂಪುಗಳಿಗೆ ಊಟ, ವಸತಿ ಅಚ್ಚುಕಟ್ಟಾಗಿ ಮಾಡಲು ಸಮನ್ವಯ ಸಾಧಿಸಬೇಕು. ವೇದಿಕೆ, ಆಹಾರ, ಸಾರಿಗೆ, ಸಾಂಸ್ಕೃತಿಕ, ಮಾಧ್ಯಮ, ನೀರು, ನೈರ್ಮಲ್ಯ, ಸುರಕ್ಷೆ, ಅಗ್ನಿಶಾಮಕ ಸೇರಿ ಎಂಟು ಸಮಿತಿ ರಚಿಸಿದ್ದು, ತಮಗೆ ವಹಿಸಿದ ಕೆಲಸ ತಪ್ಪದೇ ಮಾಡಬೇಕು ಎಂದರು.
ರಾಜ್ಯ ಜೀವನೋಪಾಯ ಅಭಿಯಾನ ವ್ಯವಸ್ಥಾಪಕ ಎಂ.ಕೆ.ಅಲಿ ಮಾತನಾಡಿ, ೨೦೧೮ರಿಂದ ರಾಷ್ಟç ಮಟ್ಟದ ಸರಸ್ ಮೇಳ ಆಯೋಜಿಸುತ್ತಿದ್ದು, ಬೆಂಗಳೂರು, ಬೆಳಗಾವಿಯಲ್ಲಿ ಮಾಡಿದ್ದು, ಕಲಬುರಗಿ ಮೂರನೇ ಮೇಳಕ್ಕೆ ಸಾಕ್ಷಿಯಾಗಲಿದೆ. ಜಿ¯್ಲÉಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಾರಾಟ ಮೇಳ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಜಿಪಂ ಸಿಇಒ ಭಂವರ್‌ಸಿAಗ್ ಮೀನಾ, ವ್ಯವಸ್ಥಾಪಕ ಬೆಳ್ಳಿಗೌಡ, ಜಿಪಂ ಯೋಜನಾ ನಿರ್ದೇಶಕ ಜಗದೇವಪ್ಪ ಇತರರಿದ್ದರು.