ಜಿಲ್ಲೆ

ಸ್ವಚ್ಛತೆ ಕಾಯ್ದುಕೊಳ್ಳುವಂತೆ ಆಗ್ರಹ

ತೆಲಸಂಗ: ಗ್ರಾಮದಲ್ಲಿ ಅಸ್ವಚ್ಛತೆ ನಿರ್ಮಾಣವಾಗಿದ್ದು, ಕೂಡಲೇ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ಗ್ರಾಮದ ರಸ್ತೆಗಳ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಮಾಡುತ್ತಿಲ್ಲ. ಶುದ್ಧ ನೀರಿನ ಘಟಕದ ಸುತ್ತಲು ದುರ್ನಾತ ಎದ್ದಿದೆ. ಈ ಎಲ್ಲ ಅವ್ಯವಸ್ಥೆಯಿಂದ ಗ್ರಾಮಸ್ಥರಲ್ಲಿ ರೋಗಗಳ ಭಯ ಕಾಡುತ್ತಿದೆ. ಈ ಕುರಿತು 3 ವರ್ಷಗಳಿಂದ ಸ್ವಚ್ಛತೆ ಕೈಗೊಳ್ಳುವಂತೆ ವಿನಂತಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಗ್ರಾಮದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದರು.

ಗ್ರಾಪಂ ಕಾರ್ಯದರ್ಶಿ ರವಿಂದ್ರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಗೋಪಾಲ ಶೆಲ್ಲೆಪ್ಪಗೋಳ, ಅಪ್ಪು ಕಲಾಲ, ನಿಂಗಪ್ಪ ಶೆಲ್ಲೆಪ್ಪಗೋಳ, ಸೋಮಣ್ಣ ಶೆಲ್ಲೆಪ್ಪಗೋಳ, ದುಂಡವ್ವ ತುರಾಯಿ, ಕಾಶವ್ವ ಶೆಲ್ಲೆಪ್ಪಗೋಳ, ಸಾಹಾದೇವಿ ತುರಾಯಿ ಇತರರು ಇದ್ದರು.