ಜಿಲ್ಲೆ

ಸ್ವಚ್ಛತೆ ಇದ್ದರೆ ಡೆಂೆ ನಿಯಂತ್ರಣ

ಚಿತ್ರದುರ್ಗ: ನಗರದ ಕೇಳಗೋಟೆ ತಿಪ್ಪೇರುದ್ರಸ್ವಾಮಿ ಮಠ ಸಮೀಪದಲ್ಲಿ ಡೆಂೆ ಜ್ವರ ಪ್ರಕರಣಗಳು ವರದಿಯಾಗಿರುವುದರಿಂದ, ಆ ಪ್ರದೇಶದ ಪ್ರತಿ ಮನೆ ತೊಟ್ಟಿ, ಡ್ರಮ್ ಸೇರಿ ನೀರು ಸಂಗ್ರಹಾರಗಳಿಗೆ ಸೋಮವಾರ ಲಾರ್ವಾಹಾರಿ ಮೀನುಗಳಾದ ಗಪ್ಪಿ ಮತ್ತು ಗಾಂಬ್ಯುಸಿಯ ಬಿಡಲಾಯಿತು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಎನ್.ಕಾಶಿ ಮಾತನಾಡಿ, ಜನರು ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಒಡೆದ ಪ್ಲಾಸ್ಟಿಕ್, ಮಡಕೆ, ತೆಂಗಿನಕಾಯಿ ಚಿಪ್ಪು, ಟೈರ್ ಇತ್ಯಾದಿ ಘನತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡಬೇಕು. ಹೂವಿನ ಕುಂಡಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿಕಡಿ ಮಾತನಾಡಿ, ಡೆಂೆ ಹಾಟ್‌ಸ್ಪಾಟ್‌ವಾರ್ಡ್ 29ರಲ್ಲಿ ಪ್ರತಿ 100 ಮನೆಗಳಲ್ಲಿ 10 ಮನೆಯಲ್ಲಿ ಲಾರ್ವಾ ಕಂಡು ಬಂದಿದೆ ಎಂದು ತಿಳಿಸಿದರು.
ಆರೋಗ್ಯ ಮೇಲ್ವಿಚಾರಕರಾದ ಸುರೇಶ್‌ಬಾಬು, ಶ್ರೀನಿವಾಸ್, ಮಲ್ಲಿಕಾರ್ಜುನ್, ನಾಗರಾಜ್, ಕಾವ್ಯಾ ಇದ್ದರು.