ಹೊಸನಗರ: ಪಟ್ಟಣ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ವಿಶೇಷವಾಗಿ ಮೂಡಿ ಬಂದಿದ್ದು ಇಡೀ ವೇದಿಕೆ ಕಾರ್ಮಿಕರಿಗೆ ಮೀಸಲಾಗಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳು ಸಭಿಕರಾಗಿ ಗಮನಸೆಳೆದರು.
ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಾಗಪ್ಪ, ಸರಸ್ವತಿ ಸೇರಿದಂತೆ 20ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಗೌರವಿಸಲಾಯಿತು.
ಮುಖ್ಯಾಧಿಕಾರಿ ಟಿ.ಬಾಲಚಂದ್ರಪ್ಪ ಮಾತನಾಡಿ, ಒಬ್ಬ ರೋಗಿಗೆ ವೈದ್ಯ ಎಷ್ಟು ಮುಖ್ಯವೋ ಅದಕ್ಕೂ ಮಿಗಿಲಾಗಿ ಪಟ್ಟಣದ ನಾಗರಿಕರಿಗೆ ಪೌರಕಾರ್ಮಿಕ ಮುಖ್ಯ. ಅವರ ಸೇವಾಗೌರವ, ವ್ಯಕ್ತಿಗೌರವಕ್ಕೆ ಮನ್ನಣೆ ನೀಡಬೇಕಾಗಿದೆ ಎಂದರು.
ತಹಸೀಲ್ದಾರ್ ವಿ.ಎಸ್.ರಾಜೀವ್ ಮಾತನಾಡಿ, ಪೌರಕಾರ್ಮಿಕರ ದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಪಟ್ಟಣ ಪಂಚಾಯಿತಿ ಗಮನಸೆಳೆದಿದೆ. ಇದು ಪೌರಕಾರ್ಮಿಕರಿಗೆ ಸಂದ ಗೌರವ ಎಂದರು. ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಜಾಥಾ ನಡೆಸಲಾಯಿತು.