ಜಿಲ್ಲೆ

ಸ್ವಚ್ಛತಾ ಕಾರ್ಮಿಕರ ಸೇವೆ ಏಕಕಾಲಕ್ಕೇ ಕಾಯಂಗೊಳಿಸಿ

ತುಮಕೂರು: ನಗರ ಸ್ಥಳಿಯ ಸಂಸ್ಥೆಗಳ ಕಾರ್ಮಿಕರ ಸೇವೆಯನ್ನು ಏಕಕಾಲದಲ್ಲಿ ಕಾಯಂಗೊಳಿಸುವಂತೆ ಆಗ್ರಹಿಸಿ ರಾಜ್ಯ ಮುನಿಸಿಪಲ್​ ಕಾರ್ಮಿಕರ ಸಂದ ನೇತೃತ್ವದಲ್ಲಿ ಕಾರ್ಮಿಕರು ಅರ್ನಿದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರದಿಂದ ಆರಂಭವಾದ ಧರಣಿಗೆ ಪೌರಕಾರ್ಮಿಕರ ಸಂ, ಪಾಲಿಕೆ ಆಟೋಚಾಲಕರು ಮತ್ತು ಸಹಾಯಕರ ಸಂ, ಜಿಲ್ಲಾ ನೀರು ಸರಬರಾಜು ನೌಕರರ ಸಂ ಹಾಗೂ ಪೌರಕಾರ್ಮಿಕರ ಜಂಟಿ ಹೋರಾಟ ಸಮಿತಿ ಬೆಂಬಲ ಸೂಚಿಸಿವೆ.

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ಮುನಿಷಿಪಲ್​ ಕಾರ್ಮಿಕರ ಸಂದ ಖಜಾಂಚಿ ವೆಂಕಟೇಶ್​, ರಾಜ್ಯದ ಎಲ್ಲ ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ ಲೋಡರ್ಸ್​, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ, ಪಾರ್ಕ್​, ಸ್ಮಶಾನ, ನತ್ಯಾಜ್ಯ ಟಕ, ಯುಜಿಡಿ ನೀರು ಸಂಸ್ಕರಣಾ ಟಕದ ಕಾರ್ಮಿಕರು, ನೀರು ಸರಬರಾಜು ನೌಕರರನ್ನು ಒಮ್ಮೆಲೇ ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯಾದ್ಯಂತ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು, ಒಳಚರಂಡಿ ಕಾರ್ಮಿಕರು, ಕಸದ ಆಟೋ ಚಾಲಕರು, ಕಾರ್ಮಿಕರು, ಲೋಡರ್​ಗಳನ್ನು ಯಾವುದೇ ವಯೋಮಿತಿ ಪರಿಗಣಿಸದೆ, ತಾರತಮ್ಯ ಮಾಡದೆ ಕಾಯಂಗೊಳಿಸಬೇಕು ಎಂದರು.

ಈ ಬಗ್ಗೆ ಸರ್ಕಾರ ಇನ್ನೆರಡು ದಿನದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಕುಡಿಯುವ ನೀರು ಪೂರೈಕೆಯನ್ನು ಬಂದ್​ ಮಾಡಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾರ್ಮಿಕ ಮುಖಂಡ ಸೈಯದ್​ ಮುಜೀಬ್​ ಮಾತನಾಡಿ, ನೇರ ಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಮನೆ&ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್​, ಕಸದ ವಾಹನ ಚಾಲಕರು, ಸಹಾಯಕರು, ಪಾರ್ಕ್​, ಸ್ಮಶಾನ, ನತ್ಯಾಜ್ಯ ಟಕ, ಯುಜಿಡಿ ನೀರು ಸಂಸ್ಕರಣಾ ಟಕದ ಕಾರ್ಮಿಕರನ್ನು ಮೇಲ್ವಿಚಾರಕರು ಎಂಬ ಅಸಂಬದ್ಧ ವಿಂಗಡಣೆಯನ್ನು ಕೈಬಿಟು ಎಲ್ಲ ಸ್ವಚ್ಛತಾ ಕಾರ್ಮಿಕರು, ನೀರು ಸರಬರಾಜು ಕಾರ್ಮಿಕರನ್ನು ಏಕಕಾಲಕ್ಕೆ ಕಾಯಂ ಮಾಡಲೇಬೇಕು ಎಂದರು.

ಅತಿಹೆಚ್ಚು ಸಂಖ್ಯೆಯಲ್ಲಿರುವ ಮಹಿಳಾ ಪೌರಕಾರ್ಮಿಕರಿಗೆ ಶೌಚಗೃಹ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿಗೃಹದಂಥ ಅತ್ಯವಶ್ಯಕ ಮೂಲಸೌಲಭ್ಯಗಳನ್ನು ಕಡ್ಡಾಯವಾಗಿ ರಾಜ್ಯದ ಎಲ್ಲೆಡೆ ನೀಡಲೇಬೇಕು ಎಂದು ಆದೇಶ ಹೊರಡಿಸುವಂತೆ ಸರ್ಕಾರಕ್ಕ ಮನವಿ ಮಾಡಿಕೊಂಡರು.

ಪೌರಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹ ಭಾಗ್ಯ ಯೋಜನೆಯನ್ನು ಕೇವಲ ಕಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡಿ ಶೇ.85 ಸ್ವಚ್ಛತಾಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.