ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಪಂ ನೌಕರರ ಸಂದ ಕಾರ್ಯಕರ್ತರು ಸೋಮವಾರ ಜಿಪಂ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿದರು. ಶಮಶಾದ ಕಲ್ಲೂರ, ರುದ್ದವ್ವ ಮಾದರ, ರೂಪಾ ಬಡಿಗೇರ, ಸಂಗೀತಾ ದಂಡಿನವರ ಇತರರಿದ್ದರು. 
ಜಿಲ್ಲೆ

ಸ್ವಚ್ಛ ವಾಹಿನಿ ನೌಕರರ ಬಾಕಿ ವೇತನ ನೀಡಲಿ: ಗ್ರಾಪಂ ನೌಕರರ ಒತ್ತಾಯ

ಬೆಳಗಾವಿ: ಗ್ರಾಪಂ ವ್ಯಾಪ್ತಿಯ ಸ್ವಚ್ಛ ವಾಹಿನಿ ನೌಕರರ ಬಾಕಿ ವೇತನ, ಏಕರೂಪ ವೇತನ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂದ ಕಾರ್ಯಕರ್ತರು ಸೋಮವಾರ ಜಿಪಂ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಪಂಗಳಲ್ಲಿ ಕಸ ವಿಲೇವಾರಿ ಮಾಡುತ್ತಿರುವ ಹಾಗೂ ವಾಹನ ಚಾಲಕರ ವೇತನ ಪ್ರತಿ ಗ್ರಾಪಂಗಳಲ್ಲಿ ಬೇರೆ ಬೇರೆಯಾಗಿದೆ. ಅದನ್ನು ಏಕರೂಪದಲ್ಲಿ ನೀಡಬೇಕು. ರಾಜ್ಯದ ಕೆಲವು ಪಂಚಾಯಿತಿಗಳಲ್ಲಿ ಮೂರು ವರ್ಷದ ವೇತನ ಬಾಕಿ ಇದ್ದು, ಕೂಡಲೇ ನೀಡಬೇಕು. ವಾಹನ ಚಾಲಕರೆಂದು ನೇಮಕಾತಿ ಮಾಡಿಕೊಂಡರೂ ಕೆಲಸ ನೀಡಿಲ್ಲ. ಕೂಡಲೇ ಕೆಲಸ ನೀಡಬೇಕು. ಕೆಲವೂಂದು ಗ್ರಾಪಂಗಳಲ್ಲಿ ವೇತನ ನೀಡಲು ಆಗುವುದಿಲ್ಲ ಎಂಬ ನೆಪದಿಂದ ನೌಕರರನ್ನು ವಜಾ ಮಾಡಲಾಗಿದೆ. ಅವರನ್ನು ಮರಳಿ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಹಾಗೂ 15ನೇ ಹಣಕಾಸಿನ ಯೋಜನೆಯಡಿ ನೌಕರರಿಗೆ ವೇತನ ನೀಡಬೇಕು ಎಂದು ಮನವಿ ಮೂಲಕ ಒತ್ತಾಯಿಸಿದ್ದಾರೆ.

ಜಿ.ಎಂ ಜೈನೆಖಾನ್​, ಮಾಡಪ್ಪೆ ಭಜಂತ್ರಿ, ಶಮಶಾದ ಕಲ್ಲೂರ, ರುದ್ದವ್ವ ಮಾದರ, ರೂಪಾ ಬಡಿಗೇರ, ಸಂಗೀತಾ ದಂಡಿನವರ ಇತರರಿದ್ದರು.