ಕಲಬುರಗಿ: ಅಬಕಾರಿ ವ್ಯಾಪಾರಿಗಳ ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅ.೨೫ರಂದು ಬೆಂಗಳೂರಿನಲ್ಲಿ ಬೃಹತ್ ಮಟ್ಟದಲ್ಲಿ ಸ್ವಚ್ಛ ಅಬಕಾರಿ ಅಭಿಯಾನ ನಡೆಸಲು ನಿರ್ಧರಿಸಲಾಗಿದ್ದು, ೧೫ ಸಾವಿರಕ್ಕೂ ಹೆಚ್ಚು ಸನ್ನದುದಾರರು ಭಾಗವಹಿಸಲಿದ್ದಾರೆ ಎಂದು ಫೆಡರೇಷನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಹೇಳಿದರು.
ಹೊರವಲಯದ ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ಸನ್ನದುದಾರರ ಸಭೆಯಲ್ಲಿ ಮಾತನಾಡಿ, ಬೆಂಗಳೂರಿನಲ್ಲಿ ನಡೆಯುವ ಹೋರಾಟದ ಪೂರ್ವಭಾವಿಯಾಗಿ ವಿಭಾಗ ಮತ್ತು ಜಿ¯್ಲÁಮಟ್ಟದ ಸಭೆಗಳನ್ನು ಆಯೋಜಿಸಿ ಸನ್ನದುದಾರರ ಸಮಸ್ಯೆ ಅಧ್ಯಯನ ಮಾಡಲಾಗುತ್ತಿದೆ. ಹತ್ತಾರು ಇಲಾಖೆಗಳು ಮಧ್ಯಪ್ರವೇಶಿಸಿ ಸನ್ನದುದಾರರಿಗೆ ಕಿರುಕುಳ ನೀಡುತ್ತಿದ್ದು, ಸರ್ಕಾರ ಸ್ಪಂದಿಸಬೇಕು. ಈ ಹಿಂದೆ ಹಲವು ಬಾರಿ ಅಬಕಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಸ್ವತಂತ್ರ ಹಾಗೂ ಮುಕ್ತ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲು ಆಗ್ರಹಿಸಲಾಗುವುದು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟಕ್ಕೂ ಸಿದ್ಧವಾಗಿz್ದೆÃವೆ. ಜಿ¯್ಲÉಗಳ ಅಬಕಾರಿ ಅಧಿಕಾರಿಗಳು ಪರವಾನಗಿ ನವೀಕರಣಕ್ಕಾಗಿ ಹಣದ ಬೇಡಿಕೆ ಒಡ್ಡುತ್ತಿರುವುದು ಹಾಗೂ ಪ್ರತಿ ತಿಂಗಳ ಲಂಚ ವಸೂಲಿ ಮೂಲಕ ಸನ್ನದುದಾರರನ್ನು ಶೋಷಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದರು.
ಜೆಡಿಎಸ್ ಜಿ¯್ಲÁಧ್ಯP್ಷÀ ಬಾಲರಾಜ್ ಗುತ್ತೇದಾರ್ ಮಾತನಾಡಿ, ರಾಜ್ಯ ಸರ್ಕಾರ ಬೇಕಾಬಿಟ್ಟಿ ಎಂಎಸ್‌ಐಎಲ್ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ ಸನ್ನದುದಾರರ ವ್ಯಾಪಾರ ಕುಸಿಯುವಂತೆ ಮಾಡುತ್ತಿದೆ. ಈ ಕುರಿತು ಮರುಚಿಂತನೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿ¯್ಲÁಧ್ಯP್ಷÀ ಅಶೋಕ್ ಗುತ್ತೇದಾರ್ ಬಡದಾಳ ಅಧ್ಯP್ಷÀತೆ ವಹಿಸಿದ್ದರು.
ಫೆಡರೇಷನ್ ಅಧ್ಯP್ಷÀ ಗುರುಸ್ವಾಮಿ, ವಿಭಾಗೀಯ ಅಧ್ಯP್ಷÀ ಜಿ.ರಾಮುಲು, ಜಿ¯್ಲÁ ಗೌರವಾಧ್ಯP್ಷÀ ವೀರಯ್ಯ ಗುತ್ತೇದಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇಚೂರ್, ಬೀದರ್ ಜಿ¯್ಲÁಧ್ಯP್ಷÀ ನಾರಾಯಣ ರಾವ್, ಯಾದಗಿರಿ ಜಿ¯್ಲÁಧ್ಯP್ಷÀ ರಾಘವೇಂದ್ರ ವಡಗೇರಿ, ಕಾರ್ಯದರ್ಶಿ ಉಮೇಶ, ರಾಯಚೂರು ಜಿ¯್ಲÁಧ್ಯP್ಷÀ ಮಂಜುನಾಥ ಹಾನಗಲï, ಪ್ರಮುಖರಾದ ತಿಮ್ಮಪ್ಪ ಗಂಗಾವತಿ, ಮಹಾದೇವ ಗುತ್ತೇದಾರ್, ರವಿ ಬೋರಾಳೆ, ಸುರೇಶ ಗುತ್ತೇದಾರ್ ಮಟ್ಟೂರು, ಅಮೋಘ ಗುತ್ತೇದಾರ್, ಸತ್ಯನಾರಾಯಣ ವಾಡಿ, ಸಾಯಬಣ್ಣ ಕಾಶಿ, ಶೇಖರ್ ಗುತ್ತೇದಾರ್ ಗಾರಂಪಳ್ಳಿ, ಸಿದ್ದು ಪಾಟೀಲï ಚಿಂಚೋಳಿ, ಹರ್ಷ ತೇರದಾಳ, ಬಿ.ಎಸ್.ಪಾಟೀಲï, ಹರ್ಷ ಗುತ್ತೇದಾರ್, ಮಂಜು ಗುತ್ತೇದಾರ್ ಚಿಗರಳ್ಳಿ, ಪವನ್ ಗುತ್ತೇದಾರ್, ರಾಜೇಶ ಗುತ್ತೇದಾರ್, ಶರಣಯ್ಯ ಗುತ್ತೇದಾರ್, ಅಂಬಯ್ಯ ಗುತ್ತೇದಾರ್ ಇತರರಿದ್ದರು.
ಆರ್.ಪಿ.ರೆಡ್ಡಿ ಸ್ವಾಗತಿಸಿದರೆ, ರಾಮುಲು ರೆಡ್ಡಿ ವಂದಿಸಿದರು.