ಅಳವಂಡಿ (ಕೊಪ್ಪಳ): ಶಾಲೆಗೆ ಬರುವ ಆಹಾರ ಧಾನ್ಯವನ್ನು ಪರಿಶೀಲಿಸಿ ಗುಣಮಟ್ಟ ಖಾತರಿಪಡಿಸಿಕೊಳ್ಳಬೇಕು ಹಾಗೂ ಆಹಾರ ತಯಾರಿಸುವ ಮುನ್ನ ಪಧಾರ್ಥಗಳು, ತರಕಾರಿಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು ಹಾಗೂ ಸ್ವಚ್ಚತೆಗೆ ಮಹತ್ವ ನೀಡಬೇಕು. ಹಾಗೂ ಬಿಸಿಯೂಟ ತಯಾರಕರು ಸ್ವಚ್ಚತೆ ಹಾಗೂ ಗುಣಮಟ್ಟಕ್ಕೆ ಒತ್ತು ನೀಡಬೇಕು ಎಂದು ಸಿಆರ್‌ಪಿ ವಿಜಯಕುಮಾರ ಟಿಕಾರೆ ತಿಳಿಸಿದರು.
ಗ್ರಾಮದ ಸರ್ಕಾರಿ ಕೇಂದ್ರೀಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಂಡಿ ಕ್ಲಷ್ಟರ್‌ನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಹಾಗೂ ಅಡುಗೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ಭಾನುವಾರ ಮಾತನಾಡಿದರು.
ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕ್ಕಿಗಳನ್ನು ಸರ್ಕಾರದ ಆದೇಶದಂತೆ ಮಕ್ಕಳಿಗೆ ನೀಡಬೇಕು. ಮಕ್ಕಳಿಗೆ ಶುದ್ದ ಕುಡಿಯುವ ನೀರು ಪೂರೈಸಬೇಕು. ಕಾಲ ಕಾಲಕ್ಕೆ ಅಡುಗಡೆ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಿಸಿ ಮುಖ್ಯ ಶಿಕ್ಷಕರಿಗೆ ಮಾಹಿತಿ ನೀಡಬೇಕು ಎಂದರು.
ಮುಖ್ಯ ಶಿಕ್ಷಕರಾದ ವಿ.ಎಚ್,ಪುಲೇಶಿ, ಮಾರುತಿ ಕಾತರಕಿ, ಮಾರುತಿ ಕಟಗಾಲಿ, ಅಶೋಕ, ಮೋತೆಪ್ಪ, ಪರಮೇಶ್ವರಪ್ಪ, ಅಜೀಂ ಪ್ರೇಮಜಿ ಪೌಂಡೇಶನ್‌ನ ಸಂಚಾಲಕ ದೇವರಾಜ ಹಾಗೂ ಅಡುಗೆ ಸಿಬ್ಬಂದಿ ಇದ್ದರು.