ಜೈಪುರ ಗ್ರಾಮದಲ್ಲಿ ಹೊಲಿಗೆ ತರಬೇತಿ ಕೇಂದ್ರ ಕಟ್ಟಡಕ್ಕೆ ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್ ಭೂಮಿಪೂಜೆ ನೆರವೇರಿಸಿದರು. ರಮೇಶ್ ಗೋವಿಂದೇಗೌಡ, ರೂಪಾ, ಸುಶೀಲಾ, ರುಕ್ಮಿಣಿಬಾಯಿ, ರಮೇಶ್ ನಾಯ್ಕ, ಜಯರಾಮ ಇತರರಿದ್ದರು. 
ಜಿಲ್ಲೆ

ಸ್ವಉದ್ಯೋಗದಿಂದ ಸ್ವಾವಲಂಬಿ ಜೀವನ

ಲಿಂಗದಹಳ್ಳಿ: ತಿಗಡ ಗ್ರಾಮ ಪಂಚಾಯಿತಿ ಮತ್ತು ನಂದಿಬಟ್ಟಲು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರು ಹೆಚ್ಚಾಗಿ ಕೂಲಿಯನ್ನೇ ನಂಬಿ ಜೀವಿಸುತ್ತಿರುವುದನ್ನು ಮನಗಂಡು ಜೈಪುರ ಗ್ರಾಮದಲ್ಲಿ ಹೊಲಿಗೆ ತರಬೇತಿ ಕೇಂದ್ರ ಸ್ಥಾಪಿಸುವ ಮೂಲಕ ಗ್ರಾಮಸ್ಥರು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗುವುದು ಎಂದು ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್ ಹೇಳಿದರು.

ತಿಗಡ ಗ್ರಾಪಂ ಜೈಪುರ ಗ್ರಾಮದಲ್ಲಿ ಭದ್ರಾ ವನ್ಯಜೀವಿ ತಣಿಗೆಬೈಲು ವಲಯ ಮತ್ತು ಶಾಸಕರ ನಿಧಿಯಲ್ಲಿ ಹೊಲಿಗೆ ತರಬೇತಿ ಕೇಂದ್ರ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಈ ಭಾಗದ ಮಹಿಳೆಯರು ಹೊಲಿಗೆ ತರಬೇತಿ ಪಡೆಯುವ ಮೂಲಕ ಸ್ವಉದ್ಯೋಗ ಮಾಡಬೇಕು ಎಂದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ತಣಿಗೆಬೈಲು ರಮೇಶ್ ಗೋವಿಂದೇಗೌಡ ಮಾತನಾಡಿ, ಶಾಸಕರ ಅನುದಾನ ಮತ್ತು ತಿಗಡ ಗ್ರಾಪಂಗಳ ಅನುದಾನಗಳ ಮೂಲಕ ಗ್ರಾಮಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಬಗರ್ ಹುಕುಂ ಸಮಿತಿ ಸದಸ್ಯ ಮಹಮ್ಮದ್ ಅಕ್ಬರ್, ಮುಖಂಡ ಸುದೀಪ್, ಗ್ರಾಪಂ ಮಾಜಿ ಸದಸ್ಯ ರಮೇಶ್ ನಾಯ್ಕ, ಮಂಜುನಾಥ್, ರುಕ್ಮಿಣಿಬಾಯಿ, ಸುಶೀಲಾ ಶಿವಣ್ಣ, ಜಯರಾಮ, ಪಾರ್ವತಮ್ಮ , ಜಯಮ್ಮ, ಶಾರದಮ್ಮ, ಶಿಲ್ಪಾ, ರೂಪಾ ಇತರರಿದ್ದರು.