ಜಿಲ್ಲೆ

ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿ ಮಾಡಿದ ರೈತರು

ಕೊಡೇಕಲ್: ಗ್ರಾಮ ಪಂಚಾಯಿತಿ ನೆರವಿಗೆ ಕಾಯದೆ ರೈತರೇ ತೀವ್ರ ಹದಗೆಟ್ಟಿದ್ದ ಜಮೀನು ರಸ್ತೆಯನ್ನು ಸ್ವಂತ ಹಣದಲ್ಲಿ ದುರಸ್ತಿ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಕೊಡೇಕಲ್ ಗ್ರಾಮದ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಮಳೆಯಿಂದಾಗಿ ಕೊಚ್ಚಿ ಹೋಗಿದ್ದರಿಂದಾಗಿ ರೈತರಿಗೆ ದೈನಂದಿನ ಚಟುವಟಿಕೆ ನಡೆಸಲು ತೀವ್ರ ತೊಂದರೆ ಎದುರಾಗಿತ್ತು. ಕೃಷ್ಣಾ ಎಡದಂಡೆ ಮುಖ್ಯ ಕಾಲುವೆ ಮೇಲ್ಭಾಗದ ಜಮೀನುಗಳಿಗೆ ಸಂಪರ್ಕ ಕಲ್ಪಿಸಲು ಗ್ರಾಪಂ ಈ ಹಿಂದೆ ಮುರುಮ್ ರಸ್ತೆ ನಿರ್ಮಿಸಿದ್ದರು. ಆದರೆ ಇತ್ತೀಚಿನ ವರ್ಷಗಳಿಂದ ಇದು ಸಂಪೂರ್ಣ ಹದಗೆಟ್ಟಿದ್ದರಿಂದ ಎತ್ತಿನ ಗಾಡಿ, ಟ್ರಾö್ಯಕ್ಟರ್‌ಗಳ ಸಂಚಾರಕ್ಕೆ ಕಷ್ಟಸಾಧ್ಯವಾಗಿತ್ತು. ಹಲವು ಬಾರಿ ಗ್ರಾಪಂ ಗಮನಕ್ಕೆ ತಂದರೂ ಪ್ರಯೋಜನವಾಗದೆ ಇದ್ದುದರಿಂದ ಬೇಸತ್ತು ರೈತರೇ ಸ್ವಂತ ಹಣದಿಂದ ರಸ್ತೆ ದುರಸ್ತಿ ಮಾಡಿಕೊಂಡಿದ್ದಾರೆ.

ನಮ್ಮ ಜಮೀನುಗಳಿಗೆ ತೆರಳಲು ತುಂಬ ತೊಂದರೆ ಅನುಭವಿಸಬೇಕಾಗಿತ್ತು. ಅದರಲ್ಲೂ ಮಳೆಗಾಲದಲ್ಲಿ ಸಂಚಾರ ಮಾಡುವುದೇ ದೊಡ್ಡ ಸವಾಲಾಗಿತ್ತು. ಹಲವು ಬಾರಿ ಪಂಚಾಯಿತಿಯವರಿಗೆ ಮನವಿ ಮಾಡಿದ್ದರೂ ಸ್ಪಂದಿಸದ್ದರಿAದ ನಾವೆಲ್ಲರೂ ಸೇರಿ ಹಣ ಸಂಗ್ರಹಿಸಿ ರಸ್ತೆ ದುರಸ್ತಿ ಮಾಡಿಕೊಂಡಿz್ದೆÃವೆ ಎನ್ನುತ್ತಾರೆ ರೈತರಾದ ಸಂಗಣ್ಣ ಬಿಳೇಬಾವಿ, ಸಂತೋಷ ಕೊಡೇಕಲ್ಮಠ.

ಹದಗೆಟ್ಟ ರಸ್ತೆಯನ್ನು ರೈತರು ಸ್ವಂತ ಹಣದಿಂದ ದುರಸ್ತಿ ಮಾಡಿಕೊಂಡಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಸರ್ಕಾರವೇ ಅಭಿವೃದ್ಧಿ ಕಾರ್ಯ ಮಾಡುವುದಿಲ್ಲ, ಸಮುದಾಯದ ಸಹಭಾಗಿತ್ವದಿಂದಲೂ ಸಾಧ್ಯ ಎಂಬುದನ್ನು ನಮ್ಮ ಕೃಷಿಕರು ತೋರಿಸಿಕೊಟ್ಟು ಆಡಳಿತಕ್ಕೆ ಬಿಸಿ ಮುಟ್ಟಿಸಿದ್ದಾರೆ ಎಂಬ ಹೆಮ್ಮೆಯ ಮಾತುಗಳು ಕೇಳಿಬರುತ್ತಿವೆ.