ಬಾಗಲಕೋಟೆ: ಇಂದಿನ ಆಧುನಿಕ ಯುಗದಲ್ಲಿ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳ ಮೂಲಕ ಗ್ರಾಮದ ಯುವಕರಿಗೆ, ಸ್ವ-ಸಹಾಯ ಸಂಘಗಳಿಗೆ ಡಿಜಿಟಲ್ ಕೌಶಲ ಅಗತ್ಯವಾಗಿದೆ ಎಂದು ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಹೇಳಿದರು.
ನವನಗರದ ಜಿಲ್ಲಾ ಪಂಚಾಯಿತಿ ಸಂಪನ್ಮೂಲ ಕೇಂದ್ರದಲ್ಲಿ ಮಂಗಳವಾರ ಗ್ರಾಮ ಡಿಜಿಟಲ್ ವಿಕಸನ ಕಾರ್ಯಕ್ರಮದಡಿ ಉತ್ತರ ಕರ್ನಾಟಕ ವಿಭಾಗದ ೧೧ ಜಿಲ್ಲೆಗಳ ಜಿಲ್ಲಾ ಸಂಯೋಜನಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರೇತರ ಸಂಸ್ಥೆಗಳು ಇಲಾಖೆಯ ಜೊತೆ ಕೈಜೋಡಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರ ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ಇಂದಿನ ಜನರಿಗೆ ತಂತ್ರಜ್ಞಾನದ ಅರಿವು ಮೂಡಿಸುವುದು ಮುಖ್ಯವಾಗಿದ್ದು, ಇದಕ್ಕಾಗಿ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಗ್ರಾಮೀಣ ಮಹಿಳೆಯರ ಅಭಿವೃದ್ಧಿ ಹೊಂದುವುದು ಅವಶ್ಯ. ಜೊತೆಗೆ ಗ್ರಾಮದಲ್ಲಿರುವ ಪ್ರತಿಯೊಬ್ಬರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅವಶ್ಯವಾಗಿರುವ ಜ್ಞಾನ ಮತ್ತು ಸಾಮರ್ಥ್ಯ ವೃದ್ದಿಸಿಕೊಳ್ಳುವುದು ಅತ್ಯಗತ್ಯ. ಈ ಹಿನ್ನಲೆಯಲ್ಲಿ ಪಂಚಾಯಿತಿ ರಾಜ್ ಇಲಾಖೆ, ಶಿಕ್ಷಣ -Ëಂಡೇಶನ್ ಹಾಗೂ ಡೆಲ್ ಸಂಸ್ಥೆ ಸಹಯೋಗದಲ್ಲಿ ರಾಜ್ಯದಲ್ಲಿ ೫೦೦೦ ಆಯ್ದ ಗ್ರಾ.ಪಂ ಗ್ರಂಥಾಲಯಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ರಾಜ್ಯದ ೬ ಲಕ್ಷ ಸ್ವ-ಸಹಾಯ ಸಂಘದ ಮಹಿಳಾ ಪ್ರತಿನಿಽಗಳಿಗೆ ಈ ಕಾರ್ಯಕ್ರಮದ ಮೂಲಕ ದೈನಂದಿನ ಜೀವನ ನಿರ್ವಹಣೆಗೆ ಅವಶ್ಯವಾದ ಡಿಜಿಟಲ್ ಸಾಕ್ಷರತೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಬಹು ನಿರೀಕ್ಷಿತ ತಂತ್ರಜ್ಞಾನದ ಸಾಗರದಲ್ಲಿ ಇಂದಿನ ವಿದ್ಯಾರ್ಥಿಗಳು ಮುಳುಗಿರುವುದು ಶೋಚನೀಯ ಸಂಗತಿಯಾಗಿದೆ. ವಿದ್ಯಾರ್ಥಿಗಳನ್ನು ತರಗತಿಯ ಪಾಠದೊಳಗೆ ತಲ್ಲಿನರಾಗುವಂತೆ ಮಾಡುವುದು ಶಿಕ್ಷಕರ ಕರ್ತವ್ಯವಾಗಿದೆ. ಶಿಕ್ಷಕನಿಗೆ ಸಹಾಯಕನಂತೆ ಕೆಲಸ ನಿರ್ವಹಿಸಲು ಶಿಕ್ಷಾಕೊ ಪೈಲಟ್. ಈ ಸ್ವಯಂ ಬುದ್ದಿಮತ್ತೆಯ ಸಹಾಯಕನಿಂದ ಶಿಕ್ಷಕರು ಕ್ಷಣಾರ್ದದಲ್ಲಿಯೇ ಪಾಠದ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳಬಹುದಾಗಿದೆ. ಹೊಸ ಹೊಸ ನಾವಿನ್ಯತೆಯ ಪಾಠದ ಮಾದರಿಗಳನ್ನು ಮಾಡಿಕೊಂಡು ವಿದ್ಯಾರ್ಥಿಗಳನ್ನು ಪಾಠದಲ್ಲಿ ತೊಡಗಿಡಿಕೊಳ್ಳಬಹುದಾಗಿದೆ ಎಂದರು.
ಯುವಕರು ತಮ್ಮ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ತಂತ್ರಜ್ಞಾನ ಕೌಶಲಗಳನ್ನು ಪಡೆದುಕೊಳ್ಳುವುದರ ಮುಖಾಂತರ ಹಾಗೂ ವೃತ್ತಿ ಮಾರ್ಗಗಳನ್ನು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಮತ್ತಷ್ಟು ಸಬಲರಾಗುವಂತೆ ಮಾಡಲು ಡಿಜಿಟಲ್ ಇನ್‌ಕ್ಲೂಷನ್ ಸೆಂಟರ್ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸಹಾಯಕ ನಿರ್ದೇಶಕ ವೆಂಕಟೇಶ ತಿಮ್ಮನಾಯ್ಕರ, ಶಿಕ್ಷಣ -Ëಂಡೇಷನ್ ಉತ್ತರ ವಲಯ ಅಽಕಾರಿ ಶರಣಪ್ಪ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಾಲೋಚನೆ ಸಭೆಯಲ್ಲಿ ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ, ಯಾದಗಿರಿ, ವಿಜಯನಗರ, ಬಳ್ಳಾರಿ, ಗದಗ, ಕೊಪ್ಪಳ, ಚಿಕ್ಕೋಡಿ, ಬೀದರ, ರಾಯಚೂರ ಜಿಲ್ಲೆಯ ಶಿಕ್ಷಣ ಫೌಂಡೇಶನ್ ಡಿಜಿಟಲ್ ಮಾಸ್ಟರ ತರಬೇತುದಾರರು ಪಾಲ್ಗೊಂಡಿದ್ದರು.